Select Your Language

Notifications

webdunia
webdunia
webdunia
webdunia

ಅನ್ನಭಾಗ್ಯ ಕಡಿತ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

ಅನ್ನಭಾಗ್ಯ ಕಡಿತ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ
ಚಿಕ್ಕಮಗಳೂರು , ಭಾನುವಾರ, 8 ಜುಲೈ 2018 (17:55 IST)
ರೈತರ ಸಾಲಮನ್ನಾಕ್ಕೆ‌ ಪಡಿತರ‌ ಕಡಿತಗೊಳಿಸಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಪಟ್ಟಣದ ನಡು ರಸ್ತೆಯಲ್ಲಿಯೇ ಶಾಸಕರಿಗೆ ತರಾಟೆ ತಗೆದುಕೊಂಡ ಮಹಿಳೆ ಗಮನ ಸೆಳೆದಿದ್ದಾಳೆ. 
ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿಗೆ ತರಾಟೆಗೆ ತಗೆದುಕೊಂಡ ತೆಗೆದುಕೊಂಡ ಮಹಿಳೆ ಸುಬ್ಬಮ್ಮ.

ಅನ್ಮಭಾಗ್ಯದ ಅಕ್ಕಿ‌ ಕಸಿದುಕೊಂಡು ಬಡವರ ಹೊಟ್ಟೆ ಮೇಲೆ‌ ಏಕೆ‌ ಹೊಡೆಯುತ್ತಿದ್ದೀರಿ ಎಂದು ಶಾಸಕರಿಗೆ  ಸುಬ್ಬಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರೇ ನೀವೂ ಹಿಂದೆ ಬಡವರಾಗಿದ್ರಿ ಎಂಬುದನ್ನು‌ ಮರೆಯಬೇಡಿ ಎಂದ‌ ಮಹಿಳೆ ಶಾಸಕರಿಗೆ ಹೇಳಿದ್ದಾಳೆ. 
ಹೀಗಾದ್ರೆ ಮಕ್ಕಳನ್ನು ಸಾಕುವುದು ಹೇಗೆ ಎಂದು‌‌ ಶಾಸಕರಿಗೆ ಪ್ರಶ್ನಿಸಿದ‌ ಮಹಿಳೆ ತಮ್ಮ ಗೋಳು ತೋಡಿಕೊಂಡಿದ್ದಾಳೆ.

ಮಹಿಳೆ ಸಮಾಧಾನ‌ಪಡಿಸಲು ಶಾಸಕ ಎಂ ಪಿ ಕುಮಾರಸ್ವಾಮಿ ಹರ ಸಾಹಸ ಪಟ್ಟರು. ಸದನದಲ್ಲಿ‌ ಈ ಬಗ್ಗೆ ಪ್ರಸ್ತಾಪ‌ ಮಾಡ್ತೇನೆ ಎಂದು ಮಹಿಳೆಗೆ ಎಂ‌ ಪಿ ಕುಮಾರಸ್ವಾಮಿ ಭರವಸೆ ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಮ್ಮಿಶ್ರ ಸರಕಾರದಲ್ಲಿ ನೆಲಬಾಂಬ್ ಗಳಿವೆ ಎಂದ ಬಿಜೆಪಿ ಶಾಸಕ!