Publish Date: Fri, 11 Sep 2020 (21:36 IST)
Updated Date: Fri, 11 Sep 2020 (21:38 IST)
ರಾಜ್ಯದ ರಾಜಕೀಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಷಯ ಮುನ್ನೆಲೆಗೆ ಬರಲಾರಂಭಿಸಿದೆ.
ಸಚಿವ ಜಗದೀಶ್ ಶೆಟ್ಟರ್ ದೆಹಲಿಗೆ ಅವರ ಇಲಾಖೆಯ ಕೆಲಸಗಳ ಸಲುವಾಗಿ ತೆರಳಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಇದೇ ವೇಳೆ, ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ ಎಂದಿದ್ದಾರೆ.
ಬಿಜೆಪಿಯ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ನಮ್ಮ ನಾಯಕ. ನಾಯಕತ್ವ ಬದಲಾವಣೆ ಅನ್ನೋದು ಕೇವಲ ಗಾಳಿಸುದ್ದಿ ಅಷ್ಟೇ ಎಂದಿದ್ದಾರೆ.