Publish Date: Mon, 26 Nov 2018 (09:12 IST)
Updated Date: Mon, 26 Nov 2018 (09:13 IST)
ಬೆಂಗಳೂರು: ಅಂಬರೀಶ್ ರನ್ನು ತಮ್ಮ ತಂದೆಯ ಸ್ಥಾನದಲ್ಲಿ ನೋಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವರ ನಿಧನದ ನಂತರ ಕೊನೆಯದಾಗಿ ಮುಖ ದರ್ಶನ ಭಾಗ್ಯ ಸಿಗುತ್ತಾ?
ಚಿತ್ರೀಕರಣಕ್ಕಾಗಿ ಸ್ವೀಡನ್ ಗೆ ತೆರಳಿದ್ದ ದರ್ಶನ್ ಗೆ ಅಂಬರೀಶ್ ಸಾವಿನ ಸುದ್ದಿ ಸಿಡಿಲಿನಂತೆ ಎರಗಿತ್ತು. ಈ ಸುದ್ದಿ ತಿಳಿದ ತಕ್ಷಣ ತನಗೆ ತಕ್ಷಣ ಅಪ್ಪಾಜಿಯನ್ನು ನೋಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ದರ್ಶನ್ ಚಡಪಡಿಸಿದ್ದರು. ಇದನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದರು ಕೂಡಾ.
ಹೇಗಾದರೂ ಸರಿಯೇ, ಅಪ್ಪಾಜಿಯ ಅಂತಿಮ ದರ್ಶನ ಪಡೆಯಲೇಬೇಕು ಎಂದು ದರ್ಶನ್ ಸ್ವೀಡನ್ ನಲ್ಲಿ ಚಿತ್ರೀಕರಣ ರದ್ದುಗೊಳಿಸಿ ಬೆಂಗಳೂರಿನತ್ತ ಹೊರಟಿದ್ದಾರೆ. ಆದರೆ ಇಂದು ಮಧ್ಯಾಹ್ನದ ವೇಳೆ ಅಂಬರೀಶ್ ಅಂತ್ಯಕ್ರಿಯೆ ನಡೆಯಬಹುದು. ಅದರೊಳಗಾಗಿ ದರ್ಶನ್ ಗೆ ಅವರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಸಿಗಬಹುದೇ?
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.