ಚಾಮರಾಜನಗರ: ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌ಟಿಆರ್) ಕಬ್ಬು ತುಂಬಿದ ಲಾರಿಯನ್ನು ಕಾಡಾನೆಯೊಂದು ಅಡ್ಡಗಟ್ಟಿ ವಿಂಡ್‌ಶೀಲ್ಡ್ ಅನ್ನು ಹಾನಿಗೊಳಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಾರ್ಪಾಲಿನ್ ಅನ್ನು ತನ್ನ ಸೊಂಡಿಲಿನಿಂದ ಹರಿದು ಹಾಕಿ, ಕಬ್ಬಿನ ಗೊಂಚಲನ್ನು ಎಳೆದಿದೆ.
ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಾಸನೂರು ಸಮೀಪದ ಅರೆಪಾಳ್ಯಂ ಜಂಕ್ಷನ್ ಮತ್ತು ದಿಂಡುಗಲ್-ಮೈಸೂರು ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್ 948) ದಿಂಬಂ ನಡುವೆ, ತಾಳವಾಡಿಯಿಂದ ಸತ್ಯಮಂಗಲದ ಖಾಸಗಿ ಸಕ್ಕರೆ ಕಾರ್ಖಾನೆಗೆ ಲಾರಿ ಕಬ್ಬನ್ನು ಸಾಗಿಸುತ್ತಿದ್ದಾಗ ನಡೆದಿದೆ.
ಲಾರಿ ಸಹಾಯಕರು ರೆಕಾರ್ಡ್ ಮಾಡಿದ 1.01 ನಿಮಿಷಗಳ ವೀಡಿಯೊದಲ್ಲಿ ಆನೆಯು ವಾಹನದ ಬಳಿಗೆ ಬಂದು ಕಬ್ಬನ್ನು ಎಳೆದಿದೆ. ನಂತರ ಚಾಲಕ ಲಾರಿಯನ್ನು ಸ್ಟಾರ್ಟ್ ಮಾಡಿ ಓಡಿಸಿದ್ದಾನೆ.