Select Your Language

Notifications

webdunia
webdunia
webdunia
webdunia

ಗೋಣಿಕೊಪ್ಪಲು: ಕಾಡಾನೆ ದಾಳಿಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು, ಸೈಕಲ್‌ನಲ್ಲಿದ್ದವ ಪಾರಾಗಿದ್ದೆ ಪವಾಡ

ಗೋಣಿಕೊಪ್ಪಲು ಕಾಡು ಆನೆ ದಾಳಿ

Sampriya

ಗೋಣಿಕೊಪ್ಪಲು , ಮಂಗಳವಾರ, 8 ಜುಲೈ 2025 (18:57 IST)
Photo Credit X
ಗೋಣಿಕೊಪ್ಪಲು:  ಇಲ್ಲಿಗೆ ಸಮೀಪದ ರುದ್ರಬೀಡು ಗ್ರಾಮದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಜೇಶ್ (40) ಎಂಬುವವರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯ ಗುರುಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

‘ಮೊದಲಿಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಅಜೇಶ್‌ ಮೇಲೆ ಆನೆ ಎರಗಿದೆ. ಗಾಯಗೊಂಡ ಅವರು ದೂರ ಓಡಿ ತಪ್ಪಿಸಿಕೊಂಡರು. ನಂತರ, ಸಮೀಪದಲ್ಲೇ ಗಡ್ಡಧಾರಿ ವ್ಯಕ್ತಿಯೊಬ್ಬರು ನಡೆಯುತ್ತ ಹೋಗುತ್ತಿದ್ದರು. ಇವರನ್ನು ನೆಲಕ್ಕೆ ಬೀಳಿಸಿದ ಕಾಡಾನೆ ದಾಳಿ ನಡೆಸಿತು. ಇದರಿಂದ ಅವರು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ. 

ಮೃತಪಟ್ಟ ವ್ಯಕ್ತಿಗೆ  ಅಂದಾಜು 45 ವರ್ಷದವರಾಗಿದ್ದು, ಸ್ಥಳೀಯರಿಗೆ ಪರಿಚಿತವಲ್ಲ ಎಂದು ತಿಳಿದುಬಂದಿದೆ. 

ಕಳೆದ 2–3 ದಿನಗಳಿಂದ ಇಲ್ಲಿ ಇವರು ಕಾಣಿಸಿಕೊಂಡಿದ್ದು, ಬಸ್‌ನಿಲ್ದಾಣದಲ್ಲಿ ಮಲಗುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇವರ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ತಪ್ಪಿಸಿಕೊಂಡ ಅಜೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಒಟ್ಟು 3 ಕಾಡಾನೆಗಳು ಪತ್ತೆಯಾಗಿವೆ. ಇವುಗಳ ಪೈಕಿ ಯಾವ ಕಾಡಾನೆ ದಾಳಿ ನಡೆಸಿತೆಂದು ಗೊತ್ತಾಗಿಲ್ಲ. ಈ ಮೂರೂ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚುತ್ತಿರುವ ಹುಲಿಗಳ ಸಂತತಿ: ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸರ್ಕಾರ ಚಿಂತನೆ, ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ