Publish Date: Fri, 26 Jun 2020 (16:46 IST)
Updated Date: Fri, 26 Jun 2020 (16:48 IST)
ಪತ್ನಿಯೊಬ್ಬಳು ಹಂತಕರಿಗೆ ಸುಪಾರಿ ನೀಡಿ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ.
ಒಬ್ಬರಾದ ಮೇಲೋಬ್ಬರಂತೆ ಒಟ್ಟು ನಾಲ್ವರನ್ನು ವಿಕಾಸ್ ಸಿಂಗ ಎಂಬಾತ ಮದುವೆಯಾಗಿ ಇದೀಗ ಕೊಲೆಗೀಡಾಗಿದ್ದಾನೆ.
ವಿಕಾಸ ಸಿಂಗನ ಮೊದಲನೇ ಪತ್ನಿ ರಜನಿಯೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದು, ರಜನಿ ಹಾಗೂ ಇಬ್ಬರು ಸುಪಾರಿ ಕಿಲ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಪ್ಪಿಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ವಿಕಾಸ ಸಿಂಗಗೆ ಸೇರಿದ ಆಸ್ತಿ ಉಳಿದ ಮೂವರು ಪತ್ನಿಯರಿಗೆ ಹಂಚಿಕೆಯಾಗುತ್ತದೆ ಎಂದು ಹೆದರಿ ಮೊದಲ ಪತ್ನಿ ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.