Publish Date: Sun, 07 Nov 2021 (12:12 IST)
Updated Date: Sun, 07 Nov 2021 (12:16 IST)
ಬೆಂಗಳೂರು : ರಾಡ್‌ನಿಂದ ಪತಿ ಹತ್ಯೆಗೈದು 2ನೇ ಪತ್ನಿ ಠಾಣೆಯಲ್ಲಿ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್(46) ಹತ್ಯೆಯಾದ ವ್ಯಕ್ತಿ.
ನೇತ್ರಾ (35) ಗಂಡನನ್ನ ಕೊಲೆಗೈದು ಮಾದನಾಯಕನಹಳ್ಳಿ ಠಾಣೆಗೆ ಶರಣಾದ ಪತ್ನಿ.
ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ನನ್ನು ಆತನ 2ನೇ ಪತ್ನಿ ನೇತ್ರಾ ರಾಡ್‌ನಿಂದ ಹತ್ಯೆಗೈದು ಮಾದನಾಯಕನಹಳ್ಳಿ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾಳೆ. ನನ್ನ ಪತಿ ಸ್ವಾಮಿರಾಜ್, ಹತ್ತಿರದ ಸಂಬಂಧಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಹಿಂಸೆ ನೀಡುತ್ತಿದ್ದ. ಈ ಹಿನ್ನೆಲೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದೇನೆ ಎಂದು ಮೃತ ಸ್ವಾಮಿರಾಜ್ನ 2ನೇ ಪತ್ನಿ ನೇತ್ರಾ ಪೊಲೀಸರೆದರು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕಳೆದ 10 ವರ್ಷದಿಂದ ನೇತ್ರಾ ಮತ್ತು ಸ್ವಾಮಿರಾಜ್ ಜೊತೆಯಾಗಿ ಜೀವನ ಸಾಗಿಸ್ತಿದ್ದರು. 2 ವರ್ಷದ ಹಿಂದೆ ಇಬ್ರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನು ಈ ಘಟನೆ ಸಂಬಂಧ ಮೃತ ಸ್ವಾಮಿರಾಜ್ನ ಮೊದಲ ಪತ್ನಿ 2ನೇ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸ್ವಾಮಿರಾಜ್ ಆಸ್ತಿಗಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೃತ ಸ್ವಾಮಿರಾಜ್ ಮೊದಲ ಪತ್ನಿ ಸತ್ಯಕುಮಾರಿ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.