Publish Date: Mon, 30 Sep 2019 (16:47 IST)
Updated Date: Mon, 30 Sep 2019 (16:48 IST)
ಪ್ರೀತಿಸಿ ಹತ್ತು ವರ್ಷ ಸಂಸಾರ ನಡೆಸಿದ ಕಿರಾತಕನೊಬ್ಬ ಸುಂದರವಾದ ತನ್ನ ಹೆಂಡತಿಯ ಜೀವನ ಅಂತ್ಯಗೊಳಿಸಿದ್ದಾನಾ?
ಮಧು ಹಾಗೂ ನಂದಿನಿ ಪರಸ್ಪರ ಪ್ರೀತಿಸಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ಪ್ರೀತಿಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಂದರವಾಗಿದ್ದ ಪತ್ನಿ ಜತೆಗೆ ಮಧು ಸುಖವಾಗಿಯೇ ಸಂಸಾರ ನಡೆಸುತ್ತಿದ್ದನು.
ಆದರೆ ಇದೀಗ ನಂದಿನಿ ಮೃತದೇಹ ಕೊಳೆತ ಸನ್ನಿವೇಶದಲ್ಲಿ ಮನೆಯಲ್ಲೇ ಪತ್ತೆಯಾಗಿದೆ. ಪತಿ ಮಧು ತನ್ನ ಪತ್ನಿ ನಂದಿನಿಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ಬೆಂಗಳೂರಿನ ಬೇಗೂರು ಠಾಣೆಯಲ್ಲಿ ನಂದಿನಿ ಕುಟುಂಬದವರು ಮಧು ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.