ಯೋಗಾ ಕ್ಲಾಸ್ ನಲ್ಲಿ ಪ್ರಿಯಕರ ಪತ್ನಿ; ಸುಪಾರಿ ಕೊಟ್ಟು ಪತಿಯನ್ನೇ ಮುಗಿಸಿದ ಹಂತಕಿ

Webdunia
ಶುಕ್ರವಾರ, 11 ಫೆಬ್ರವರಿ 2022 (16:08 IST)
ಯೋಗಾ ಕ್ಲಾಸ್ ನಲ್ಲಿ ಪ್ರಿಯಕರನೊಂದಿಗೆ ಇದ್ದದ್ಧನ್ನು ಕಂಡ ಪತಿಯನ್ನು ತಾನೇ ಪ್ರಿಯಕರನಿಗೆ ತಿಳಿಸಿ ಸುಫಾರಿ ಕೊಟ್ಟು ಹತ್ಯೆಗೈಯಿಸಿದಂತ ಘನಘೋರ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿಯಲ್ಲಿ ಜನವರಿ 31ರಂದು ನಡೆದಿದ್ದಂತ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ನುಗ್ಗೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದು, ಹತ್ಯೆಯ ಹಿಂದಿನ ರಹಸ್ಯವನ್ನು ಬೇಧಿಸಿದ್ದಾರೆ.
ಜನವರಿ 31ರಂದು ಮಕ್ಕಳನ್ನು ಶಾಲೆಯಿಂದ ಕರೆತರೋದಕ್ಕೆ ತೆರಳಿದ್ದಂತ ಆನಂದ್ ಕುಮಾರ್ (42) ಎಂಬಾತನನ್ನು,ಕಾವಲು ಹೊಸೂರು ಗೇಟ್ ಬಳಿಯಲ್ಲಿ ಇಬ್ಬರು ಅಪರಿಚಿತರು ಅಡ್ಡಗಟ್ಟಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು.
ಈ ಪ್ರಕರಣ ಕುರಿತಂತೆ ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸಿದಂತ ಎಸ್ ಪಿ ಶ್ರೀನಿವಾಸಗೌಡ ವಿಶೇಷ ತಂಡದ ತನಿಖಾ ಪೊಲೀಸರಿಗೆ, ಆನಂದ್ ಕುಮಾರ್ ಪತ್ನಿ,ಸುನೀತಾಳ ಬಗ್ಗೆಯೇ ಅನುಮಾನ ಮೂಡತೊಡಗಿತ್ತು. ಆಕೆಯನ್ನು ವಿಚಾರಣೆಗೆ ಒಳಡಿಸಿದ್ರೂ ತಾನು ಪತಿಯ ಕೊಲೆಗೆ ಕಾರಣವಲ್ಲ ಎಂಬುದಾಗಿ ನಾಟಕವಾಡಿದ್ದರು.
ಇನ್ನು, ಪೊಲೀಸರು ತಮ್ಮ ಶೈಲಿಯಲ್ಲಿ ಸುನೀತಾಳನ್ನು ವಿಚಾರಿಸಿದಾಗ ಆನಂದ್ ಕುಮಾರ್ ಹತ್ಯೆಯ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದು, ತಾನೇ ಪ್ರಿಯಕರನಿಗೆ ತಿಳಿಸಿ, ಪತಿಯನ್ನು ಸುಫಾರಿ ಕೊಟ್ಟು ಹತ್ಯೆಗೈಯಿಸಿದಂತ ಮಾಹಿತಿಯನ್ನು ತಿಳಿಸಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಬಳಿಕ ಫೈನಲ್ ನಿರ್ಧಾರ ಹೇಳಿದ ಸಿಎಂ ಸಿದ್ದರಾಮಯ್ಯ

ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಆಪರೇಷನ್ ಸಾಗರ್ ಬಂಧು ಆರಂಭಿಸಿದ ಭಾರತ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಮುಂದಿನ ಸುದ್ದಿ
Show comments