Select Your Language

Notifications

webdunia
webdunia
webdunia
webdunia

ಅಭ್ಯರ್ಥಿಗಿಂತ ಪತ್ನಿಯೇ ಸಿರಿವಂತೆ

ಉಪಚುನಾವಣೆ
ಮಂಡ್ಯ , ಮಂಗಳವಾರ, 16 ಅಕ್ಟೋಬರ್ 2018 (16:28 IST)
ಮಂಡ್ಯ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್.ಆರ್.ಶಿವರಾಮೇಗೌಡ ಅವರಿಗಿಂತ ಅವರ ಪತ್ನಿ ಸುಧಾ ಶಿವರಾಮೇಗೌಡ ಸಿರಿವಂತೆಯಾಗಿದ್ಧಾರೆ.

ಶಿವರಾಮೇಗೌಡ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಸುಧಾ ಶಿವರಾಮೇಗೌಡ ಬಳಿ 35 ಲಕ್ಷ ರೂ. ಮೌಲ್ಯದ 1.122 ಕೆಜಿ ಚಿನ್ನ, ಮೂರು ಕಾರುಗಳ ಒಡತಿಯಾಗಿದ್ದಾರೆ. 12.78 ಲಕ್ಷ ರೂ.ಗಳ ಡಸ್ಟರ್ ಕಾರು, 11.89 ಲಕ್ಷ ರೂ. ಎಕೋ ಸ್ಪೋರ್ಟ್ ಕಾರು, 16.88 ಲಕ್ಷ ರೂ.ಗಳ ನಿಸ್ಸಾನ್ ಕಾರು ಹೊಂದಿದ್ದಾರೆ.

ಸುಧಾ ಶಿವರಾಮೇಗೌಡರು ಒಟ್ಟು 82,76,718 ಚರ ಮತ್ತು ಸ್ಥಿರಾಸ್ಥಿ ಹೊಂದಿದ್ದಾರೆ. ಎಲ್.ಆರ್.ಶಿವರಾಮೇಗೌಡರ ಬಳಿ 3.50 ಲಕ್ಷ ರೂ. ಮೌಲ್ಯದ 1.12 ಕೆಜಿ ಚಿನ್ನವಿದೆ. ಮಾರುತಿ ಸ್ವಿಫ್ಟ್, ಇನೊವಾ ಕಾರು, ಸ್ಕಾರ್ಪಿಯೋ ಕಾರುಗಳಿಗೆ ಒಡೆಯರಾಗಿದ್ದಾರೆ. ಇನ್ನಿತರ ಆಸ್ತಿ ಹೊಂದಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ವೆಬ್‌ದುನಿಯಾದಿಂದ ಎಲ್‌ಓಸಿ ವರ್ಲ್ಡ್ ಸಿಯಾಟಲ್, ಬೂತ್ # 102 ಪ್ರದರ್ಶನ