Select Your Language

Notifications

webdunia
webdunia
webdunia
webdunia

ಉಪ ಚುನಾವಣೆ: ಬಿಜೆಪಿಗೆ ಮುಖಭಂಗವಾಗುತ್ತೆ ಎಂದ ಡಿಸಿಎಂ

ಉಪ ಚುನಾವಣೆ: ಬಿಜೆಪಿಗೆ ಮುಖಭಂಗವಾಗುತ್ತೆ ಎಂದ ಡಿಸಿಎಂ
ಹುಬ್ಬಳ್ಳಿ , ಮಂಗಳವಾರ, 16 ಅಕ್ಟೋಬರ್ 2018 (15:43 IST)
ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ ಹೇಳಿಕೆ ನೀಡಿದ್ದು, ಬೈ ಏಲೆಕ್ಷನ್ ನಲ್ಲಿ ಮೈತ್ರಿ ಸರ್ಕಾರದ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.

ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲೂ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

ಇನ್ನು ತೈಲ ಬೆಲೆ ಏರಿಕೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಜನ ತಕ್ಕ ಪಾಠ ಕಲಿಸುತ್ತಾರೆ. ನಾವು ಸೀಟು ಹಂಚಿಕೆಯಲ್ಲಿ ನಂಬರ್ ಗೇಮ್ ಆಡುತ್ತಿಲ್ಲ. ಉಪ ಚುನಾವಣೆಯದ್ದರಿಂದ ಗೆಲ್ಲೋ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿದ್ದೇವೆ ಎಂದು ಹುಬ್ಬಳ್ಳಿ  ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿಕೆ ನೀಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿಯಲ್ಲಿ ಭಿನ್ನಮತವಿಲ್ಲ ಎಂದ ಸಿದ್ದರಾಮಯ್ಯ