Publish Date: Tue, 16 Oct 2018 (16:21 IST)
Updated Date: Tue, 16 Oct 2018 (16:23 IST)
ಉಪಚುನಾವಣೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿರುವ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದರೆ, ಜನರು ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದರು.
ಜಮಖಂಡಿ ವಿಧಾನಸಭಾ ಉಪ ಚುನಾವಣೆ ಕದನ ತಾರಕಕ್ಕೇರಿದೆ. ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಹಾಗೂ ಕಾಂಗ್ರೆಸ್ ಪಕ್ಷದ ಆನಂದ್ ನ್ಯಾಮಗೌಡ ಅಭ್ಯರ್ಥಿಗಳಿಬ್ಬರು ಬೃಹತ್ ಮರೆವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು.
ಇತ್ತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ಎರಡೂ ಪಕ್ಷದ ಘಟನಾಘಟಿ ನಾಯಕರುಗಳು ಜಮಖಂಡಿಗೆ ಆಗಮಿಸಿದ್ದರು.
ಕೈ ಪಕ್ಷದ ಅಭ್ಯರ್ಥಿ ಆನಂದ್ ನ್ಯಾಮಗೌಡ ಬೆಳಿಗ್ಗೆಯೇ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಮಳೆ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತ್ರ ಕಡಪಟ್ಟಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗಿಯಾದರು.
ಇನ್ನು ಆನಂದ್ ನ್ಯಾಮಗೌಡ ಪರ ನಾಮಪತ್ರ ಸಲ್ಲಿಕಾ ಕಾಯರ್ಯಕ್ರಮಕ್ಕಾಗಿ ಜಮಖಂಡಿ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಬೆಳ್ಳಂ ಬೆಳಿಗ್ಗೆ ಪೊಲೋ ಮೈದಾನದಲ್ಲಿ ಭರ್ಜರಿ ವಾಕಿಂಗ್ ಮಾಡಿದರು. ಸತತ ಒಂಭತ್ತು ರೌಂಡ್ ವಾಕ್ ಮಾಡಿದ ಸಿದ್ದರಾಮಯ್ಯ, ನಗರದ ಜನ್ರಿಗೆ ಕುತೂಹಲ ಮೂಡಿಸಿದರು. ಮಾಜಿ ಸಿಎಂ ವಾಕ್ ಮಾಡ್ತಿದ್ರೆ, ಇತ್ತ ಸೇರಿದ ಜನ್ರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ರು.