Publish Date: Thu, 08 Oct 2020 (09:15 IST)
Updated Date: Thu, 08 Oct 2020 (16:59 IST)
ಬೆಂಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿ ಕೊಲೆ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ನಡೆದಿದೆ.
ನಾಗರಾಜನಾಯ್ಕ(40) ಕೊಲೆಯಾದ ಪತಿ, ಪದ್ಮಾ(26), ಮಣಿಕಂಠ(26) ಕೊಲೆ ಆರೋಪಿಗಳು. ಮಧ್ಯರಾತ್ರಿಯಲ್ಲಿ ತೊಂಡವಾಡಿ ಜಮೀನಿನೊಂದರಲ್ಲಿ ಪತ್ನಿ, ಪ್ರಿಯಕರನ ಜೊತೆ ಚಕ್ಕಂದವಾಡುತ್ತಾ ಕಾಮ ದಾಸೆ ಪೂರೈಸಿಕೊಳ್ಳುತ್ತಿದ್ದರು. ಆಗ ಪತ್ನಿಯು ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆ ವೇಳೆ ಪತ್ನಿ ಪ್ರಿಯಕರನ ಸಹಾಯದಿಂದ ಪತಿಯನ್ನು ಕಲ್ಲಿನಿಂದ ಹೊಡೆದು ಕೊಂದು ಕಾಲುವೆಗೆ ಎಸೆದಿದ್ದಾರೆ. ಬಳಿಕ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದಿಂದ ಮೊದಲಿಗೆ ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ತಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.