Publish Date: Mon, 29 Dec 2025 (08:48 IST)
Updated Date: Mon, 29 Dec 2025 (08:58 IST)
ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರ ಮನೆ ತೆರವುಗೊಳಿಸಿದ್ದಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕೆ ಮಾಡಿದ್ದರ ಹಿಂದಿದೆ ಭಾರೀ ಸೀಕ್ರೆಟ್.
ಕೋಗಿಲು ಲೇಔಟ್ ನಲ್ಲಿ ಸರ್ಕಾರೀ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮುಸ್ಲಿಮರ ವಸತಿಗಳನ್ನು ರಾಜ್ಯ ಸರ್ಕಾರ ಕೆಡವಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಇದು ಉತ್ತರ ಪ್ರದೇಶದ ಬುಲ್ಡೋಜರ್ ಸಂಸ್ಕೃತಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದರು.
ಅಲ್ಲದೆ, ಕೇರಳ ಸಂಸದ ಕೋಗಿಲು ಲೇಔಟ್ ಗೆ ಬಂದು ಅಲ್ಲಿನ ಜನರ ಕಷ್ಟ ವಿಚಾರಿಸಿದ್ದರು. ಅಷ್ಟಕ್ಕೂ ಈ ವಿಚಾರದಲ್ಲಿ ಕೇರಳದ ಸಿಪಿಎಂ ಮಧ್ಯಪ್ರವೇಶಿಸಿರುವುದು ಯಾಕೆ ಎಂದು ಎಲ್ಲರಿಗೂ ಅಚ್ಚರಿಯಾಗಿರಬಹುದು.
ಕೇರಳದಲ್ಲಿ ಈಗ ಸಿಪಿಎಂ ನೇತೃತ್ವದ ಎಲ್ ಡಿಎಫ್ ಮುಸ್ಲಿಮರ ವೋಟ್ ಪಡೆಯಲು ವಿಫಲವಾಗುತ್ತಿದೆ. ತೀರಾ ಇತ್ತೀಚೆಗೆ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಗಳಿಸಿತ್ತು. ಇದೀಗ ಮುಸ್ಲಿಮರ ಬೆಂಬಲ ಗಿಟ್ಟಿಸಲೆಂದೇ ಕೇರಳ ಸಿಎಂ ಈ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ವಿರೋಧಿ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಇದಕ್ಕೆ ಡಿಕೆ ಶಿವಕುಮಾರ್ ಈಗಾಗಲೇ ತಿರುಗೇಟು ನೀಡಿದ್ದು, ಮುಂದೆ ಚುನಾವಣೆ ಇದೆ ಎಂದು ಇಲ್ಲಿ ರಾಜಕೀಯ ಮಾಡಲು ಬರಬೇಡಿ ಎಂದು ಮಾಧ್ಯಮಗಳ ಮುಂದೆ ತಿರುಗೇಟು ನೀಡಿದ್ದರು.