Publish Date: Sun, 28 Dec 2025 (11:21 IST)
Updated Date: Sun, 28 Dec 2025 (11:23 IST)
ನವದೆಹಲಿ: ಅಧಿಕಾರ ಹಂಚಿಕೆ ನಿರೀಕ್ಷೆಯಲ್ಲಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಶಾಕ್ ಕೊಟ್ಟಿದ್ದಾರೆ. ಸದ್ಯಕ್ಕಂತೂ ರಾಹುಲ್ ಯಾರ ಕೈಗೂ ಸಿಗಲ್ಲ.
ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ-ಡಿಕೆಶಿ ಬಣ ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಕಾದು ಕುಳಿತಿದ್ದಾರೆ. ನಿನ್ನೆ ದೆಹಲಿ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಜೊತೆ ಮಾತನಾಡಬಹುದು ಎಂದು ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿದ್ದರು.
ಆದರೆ ಅದು ಸುಳ್ಳಾಗಿದೆ. ಹೊಸ ವರ್ಷಕ್ಕೆ ಗುಡ್ ನ್ಯೂಸ್ ಸಿಗಬಹುದು ಎಂದು ಡಿಕೆಶಿ ನಿರೀಕ್ಷೆಯೂ ಸುಳ್ಳಾಗಲಿದೆ. ಯಾಕೆಂದರೆ ರಾಹುಲ್ ಇವರು ಯಾರ ಕೈಗೂ ಸಿಗಲ್ಲ. ಅಧಿಕಾರ ಹಂಚಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ರಾಜ್ಯ ನಾಯಕರಿಗೆ ರಾಹುಲ್ ಶಾಕ್ ಕೊಟ್ಟು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಇಂದು ರಾತ್ರಿಯೇ ರಾಹುಲ್ ವಿದೇಶ ಪ್ರವಾಸ ಮಾಡಲಿದ್ದು ಇನ್ನು ಒಂದು ವಾರದ ಮಟ್ಟಿಗೆ ಅವರು ಭಾರತದಲ್ಲಿರಲ್ಲ. ಪ್ರತೀ ವರ್ಷದಂತೆ ಈ ವರ್ಷವೂ ಅವರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ವಿದೇಶಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ರಾಜ್ಯ ನಾಯಕರ ಸಮಸ್ಯೆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವಾಗದು. ಹೀಗಾಗಿ ಸಂಕ್ರಾಂತಿ ವೇಳೆಗಾದರೂ ಹೈಕಮಾಂಡ್ ತೀರ್ಮಾನ ಮಾಡಬಹುದು ಎಂದು ಕಾಯುವುದಷ್ಟೇ ರಾಜ್ಯ ನಾಯಕರ ಮುಂದಿರುವ ಆಯ್ಕೆಯಾಗಿದೆ.