ಬೆಂಗಳೂರು: ಕರ್ನಾಟಕ ಹವಾಮಾನದಲ್ಲಿ ಕಳೆದ ಎರಡು ವಾರಗಳಿಂದ ಸಾಕಷ್ಟು ಬದಲಾವಣೆಯಾಗಿದ್ದು ಹಗಲು ಬಿಸಿಲು, ರಾತ್ರಿ ತಂಪಾಗಿರುತ್ತದೆ. ಇದಕ್ಕೆ ಕಾರಣವೇನು ಇಲ್ಲಿ ನೋಡಿ.
ಕಳೆದ ಎರಡು ವಾರಗಳಿಂದ ಹಗಲು ಬೇಸಿಗೆಯಂತೆ ವಿಪರೀತ ಬಿಸಿಲಿ ಝಳವಿರುತ್ತದೆ. ರಾತ್ರಿ ಹೊತ್ತು ಚಳಿಗಾಲದಂತೆ ತಂಪು, ಒಣ ವಾತಾವರಣವಿರುತ್ತದೆ. ಇದರಿಂದ ಕೈ ಕಾಲು, ಮೂಗು ಬಿರುಕು ಬಿಟ್ಟಂತಾಗುವುದು ಮುಂತಾದ ಸಮಸ್ಯೆ ಎದುರಿಸುತ್ತಿದ್ದೇವೆ. ಜೊತೆಗೆ ದೇಹವೂ ಹೆಚ್ಚು ಡಿಹೈಡ್ರೇಟ್ ಆಗುತ್ತಿದೆ.
ಅಷ್ಟಕ್ಕೂ ಹಗಲು ಬಿಸಿ, ರಾತ್ರಿ ತಂಪಾಗಿರುವುದಕ್ಕೆ ಕಾರಣವೇನು ಗೊತ್ತಾ? ಹವಾಮಾನ ವರದಿ ಪ್ರಕಾರ ಇದಕ್ಕೆ ತಮಿಳುನಾಡಿನಿಂದ ಬೀಸುತ್ತಿರುವ ಪೂರ್ವ ಮಾರುತ ಕಾರಣ ಎನ್ನಲಾಗಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಹಗಲು ಬೇಸಿಗೆಯಂತಿದ್ದು ರಾತ್ರಿ ಚಳಿಗಾಲದ ವಾತಾವರಣವಿರುತ್ತದೆ.
ಇನ್ನು ಎರಡು ವಾರಗಳ ಬಳಿಕ ರಾಜ್ಯಕ್ಕೆ ಉಷ್ಣಗಾಳಿ ಆರಂಭವಾಗಲಿದ್ದು, ಆಗ ಬಿರು ಬೇಸಿಗೆ ಆರಂಭವಾಗಲಿದೆ. ಫೆಬ್ರವರಿ ಕೊನೆಯವರೆಗೂ ಚಳಿಗಾಲ ಮುಂದುವರಿಯಲಿದೆ. ಆದರೆ ಮಾರ್ಚ್ ನಿಂದ ಬೇಸಿಗೆಗಾಲ ಶುರುವಾಗಲಿದೆ ಎಂದು ತಿಳಿದುಬಂದಿದೆ. ಮುಂದಿನ ಒಂದು ವಾರ ಉರಿ ಬಿಸಿಲು ಮುಂದುವರಿಯಲಿದೆ.