Select Your Language

Notifications

webdunia
webdunia
webdunia
webdunia

ಕರ್ನಾಟಕ ಹವಾಮಾನ: ಈ ವರ್ಷ ಮಳೆಗಾಲ ಆರಂಭವಾಗೋದು ಯಾವಾಗ

Bangalore Rains

Krishnaveni K

ಬೆಂಗಳೂರು , ಸೋಮವಾರ, 3 ಫೆಬ್ರವರಿ 2025 (09:16 IST)
ಬೆಂಗಳೂರು: ಕರ್ನಾಟಕದಲ್ಲಿ ಇನ್ನೇನು ಚಳಿಗಾಲ ಕೊನೆಯ ಹಂತಕ್ಕೆ ಬಂದಿದ್ದು, ಬೇಸಿಗೆ ಮುಗಿದು ಬೇಗ ಮಳೆಗಾಲ ಬರಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಈ ವರ್ಷ ಮಳೆಗಾಲ ಯಾವಾಗ ಶುರುವಾಗುತ್ತದೆ? ಇಲ್ಲಿದೆ ಉತ್ತರ.

ಕರ್ನಾಟಕದಲ್ಲಿ ಈ ವರ್ಷ ಸಾಕಷ್ಟು ಮಳೆಯಾಗಿತ್ತು. ಇತ್ತೀಚೆಗೆ ಜನವರಿಯಲ್ಲೂ ಹಲವೆಡೆ ಮಳೆ ಸುರಿದಿತ್ತು. ಹೀಗಾಗಿ ಕಳೆದ ವರ್ಷದಷ್ಟು ಈ ವರ್ಷ ನೀರಿಗಾಗಿ ಹಾಹಾಕಾರವಿಲ್ಲ. ಹಾಗಿದ್ದರೂ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿದ್ದಲ್ಲ.

ಇದೀಗ ತಾಪಮಾನದಲ್ಲಿ ದಿನೇ ದಿನೇ ಸಣ್ಣ ಮಟ್ಟಿನ ಏರಿಕೆ ಕಂಡುಬರುತ್ತಿದ್ದು ಕೆಲವು ದಿನಗಳ ಬಳಿಕ ಬೇಸಿಗೆ ಶುರುವಾಗಲಿದೆ. ಇತ್ತೀಚೆಗೆ ಪದೇ ಪದೇ ವಾಯುಭಾರ ಕುಸಿತವಾಗುತ್ತಿರುವ ಕಾರಣ ಈ ಬಾರಿ ಮಳೆಯೂ ಬೇಗನೇ ಆರಂಭವಾಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

ಹವಾಮಾನ ವರದಿಗಳ ಈಗಿನ ಅಂದಾಜು ಪ್ರಕಾರ ಈ ವರ್ಷ ಮೇ ಅಂತ್ಯಕ್ಕೆ ಮಳೆ ಶುರುವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಮೇ ಕೊನೆಯ ವಾರದಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷದಂತೇ ಈ ವರ್ಷವೂ ಉತ್ತಮ ಮಳೆ ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂಭಮೇಳಕ್ಕೆ ಇಂದು ಹೋಗುವವರು ಈ ವಿಚಾರ ಗಮನಿಸಿ