Select Your Language

Notifications

webdunia
webdunia
webdunia
webdunia

ಕರ್ನಾಟಕ ಹವಾಮಾನ: ಇಂದು, ನಾಳೆ ರಾಜ್ಯದ ಹವಾಮಾನದ ಬಗ್ಗೆ ಇರಲಿ ಎಚ್ಚರ

Karnataka Rain

Krishnaveni K

ಬೆಂಗಳೂರು , ಬುಧವಾರ, 5 ಫೆಬ್ರವರಿ 2025 (09:44 IST)
ಬೆಂಗಳೂರು: ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಹವಾಮಾನದ ಬಗ್ಗೆ ಜನರು ಎಚ್ಚರವಾಗಿರಬೇಕು. ಅದಕ್ಕೆ ಕಾರಣವೇನು, ಹವಾಮಾನದ ಲೇಟೆಸ್ಟ್ ವರದಿ ಏನು ಇಲ್ಲಿದೆ ಡೀಟೈಲ್ಸ್.

ಕಳೆದ ಎರಡು ವಾರಗಳಿಂದ ಕರ್ನಾಟಕದ ಹವಾಮಾನದಲ್ಲಿ ಸಣ್ಣ ಮಟ್ಟಿಗೆ ಬದಲಾವಣೆ ಕಂಡುಬರುತ್ತಲೇ ಇದೆ. ಒಣ ಹವೆ ಮುಂದುವರಿದಿದ್ದು, ಚಳಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಅತ್ತ ಬೇಸಿಗೆಗೆ ಕಾಲಿಡುವ ಲಕ್ಷಣ ಕಂಡುಬರುತ್ತಿದೆ.

ವಿಶೇಷವಾಗಿ ಹಗಲು ಹೊತ್ತಿನಲ್ಲಿ ವಿಪರೀತ ಬಿಸಿಲಿನ ಝಳ ಕಂಡುಬರುತ್ತಿದೆ. ಇದರಿಂದಾಗಿ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ. ಇದೀಗ ಇಂದು ಮತ್ತು ನಾಳೆ ತಾಪಮಾನದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದೆ.

ವಿಶೇಷವಾಗಿ ಇಂದು, ನಾಳೆ ಹಗಲು ಬಿಸಿಲಿನ ತಾಪ ವಿಪರೀತ ಎನಿಸುವಷ್ಟು ಇರಲಿದೆ. ಹೀಗಾಗಿ ಮಧ್ಯಾಹ್ನದ ಹೊತ್ತು ಹೊರಗೆ ಓಡಾಡುವುದಕ್ಕೆ ಕಡಿವಾಣ ಹಾಕಿದರೆ ಉತ್ತಮ. ಇಂದು ಮತ್ತು ನಾಳೆ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರವಿಂದ್ ಕೇಜ್ರಿವಾಲ್ ಹೋಗಲ್ಲ, ಮೋದಿ ಯಾಕೆ ಈಗ್ಲೇ ಕುಂಭಮೇಳಕ್ಕೆ ಹೋಗಬೇಕು: ಆಪ್ ತಗಾದೆ