Publish Date: Tue, 25 Dec 2018 (13:58 IST)
Updated Date: Tue, 25 Dec 2018 (14:04 IST)
ನೂತನ ಸಚಿವರ ಕಾಲಿಗೆ ಬಿದ್ದು ಮೇಯರ್ ಒಬ್ಬರು ನಮಸ್ಕರಿಸಿರುವ ಘಟನೆ ನಡೆದಿದೆ.
ಸಚಿವರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ ಸತೀಶ್ ಜಾರಕಿಹೊಳಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಮಾಲಾರ್ಪಣೆ ಮಾಡಲು ಬಂದಾಗ ಕಾಲು ಬಿದ್ದು ಸ್ವಾಗತ ಮಾಡಿಕೊಂಡ ಮೇಯರ್ ನಡೆ ಕುತೂಹಲ ಮೂಡಿಸಿತು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಅವರೇ ಸಚಿವ ಸತೀಶ ಜಾರಕಿಹೊಳಿ ಅವರ ಕಾಲಿಗೆ ಬಿದ್ದವರಾಗಿದ್ದಾರೆ. ಮೇಯರ್ ಆಗಿರುವ ಬಸಪ್ಪ ಸಾರ್ವಜನಿಕವಾಗಿ ಸಚಿವರ ಕಾಲಿಗೆ ಬಿದ್ದದ್ದು ಚರ್ಚೆಗೆ ಕಾರಣವಾಯಿತು.
Jagadeesh
Publish Date: Tue, 25 Dec 2018 (13:58 IST)
Updated Date: Tue, 25 Dec 2018 (14:04 IST)