Publish Date: Tue, 25 Jun 2019 (19:18 IST)
Updated Date: Tue, 25 Jun 2019 (19:20 IST)
ಕಬ್ಬಿನ ಗದ್ದೆಯಲ್ಲಿ ವಯಸ್ಕರನೊಬ್ಬನ ಶವ ಪತ್ತೆಯಾಗಿದ್ದು, ಅದು ಕೊಲೆಮಾಡಿರುವಂತೆ ಕಂಡುಬರುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಚಿಕ್ಕೋಡಿಯ ಐನಾಪೂರ - ಕುಡಚಿ ರಸ್ತೆ ಮಧ್ಯದ ಕಬ್ಬಿನ ಗದ್ದೆಯಲ್ಲಿ ಕೊಲೆಮಾಡಲಾದ ಶವ ಪತ್ತೆಯಾಗಿದ್ದು ಸುಮಾರು 37 ವಯಸ್ಸಿನ ವ್ಯಕ್ತಿಯ ಶವ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯ ಹೊಟ್ಟೆಯನ್ನು ಇರಿದು ಕೊಲೆ ಮಾಡಲಾಗಿದೆ.
ಶವದ ಜೇಬಿಯಲ್ಲಿ ಪ್ಯಾನ್ ಕಾರ್ಡಗೆ ನೀಡಲು ಬೇಕಾದ ದಾಖಲಾತಿಗಳು ಸಿಕ್ಕಿದ್ದು, ಆ ದಾಖಲಾತಿಗಳಲ್ಲಿ ಬಾಗಲಕೋಟ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಪಾರೀಸ ಜಿನಪ್ಪ ಜಮಖಂಡಿ (37) ಇವರ ದಾಖಲಾತಿಗಳು ಸಿಕ್ಕಿವೆ. ಈ ಹೆಸರಿನವರಿಗೆ ಸಂಬಂಧ ಪಟ್ಟಂತಹ ಸಂಬಂಧಿಗಳು, ಸ್ಥಳಕ್ಕೆ ಆಗಮಿಸಿ ಶವವನ್ನು ಪರಶೀಲಿಸಿ ಮೃತನನ್ನು ಪಾರೀಸ ಜಿನಪ್ಪ ಜಮಖಂಡಿ ಎಂದು ಗುರುತಿಸಿದ್ದಾರೆ.
ಸ್ಥಳಕ್ಕೆ ಬೆಳಗಾವಿ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದ್ದಾರೆ. ಅಥಣಿ ಡಿವಾಯ್ಎಸ್ಪಿ ರಾಮಗೊಂಡ ಬಸರಗಿ, ಸಿಪಿಐ ಅಲಿಸಾಬ ಐ.ಬಿ., ಹಾಗೂ ಕಾಗವಾಡ ಪಿಎಸ್ಐ ಹಣಮಂತ ಶಿರಹಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.