Select Your Language

Notifications

webdunia
webdunia
webdunia
webdunia

ಪ್ರೀತಿ ಮಾಡೋದು ಬಿಡಲ್ಲ ಎಂದ ಯುವಕ ಹೆಣವಾದ

ಪ್ರೀತಿ ಮಾಡೋದು ಬಿಡಲ್ಲ ಎಂದ ಯುವಕ ಹೆಣವಾದ
ದಾವಣಗೆರೆ , ಭಾನುವಾರ, 16 ಜೂನ್ 2019 (18:22 IST)
ಪ್ರೀತಿ ಮಾಡೋದನ್ನು ಬಿಡುವುದಿಲ್ಲ ಎಂದ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ.

ಯುವಕನೊಬ್ಬನ ಬರ್ಬರ ಕೊಲೆ ನಡೆದಿದೆ. ದಯಾನತ್ ಖಾನ್ (20)ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ದುರ್ಗಿಗುಡಿ ನಿವಾಸಿಯಾಗಿರುವ ದಯಾನತ್  ಖಾನ್, ಗ್ಯಾರೇಜ್ ಕೆಲಸ ಮಾಡುತ್ತಿದ್ದನು.
ಕಳೆದ ಒಂದು ವರ್ಷದಿಂದ ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯ ಬಾಷಾಸಾಬ್ ಎಂಬುವರ  ಮಗಳನ್ನು ಪ್ರೀತಿ  ಮಾಡುತ್ತಿದ್ದ ಎಂದು ಕೊಲೆಯಾದ  ವ್ಯಕ್ತಿಯ ತಂದೆ ಹೇಳಿಕೆ ನೀಡಿದ್ದಾರೆ.

ಕಳೆದ ಮೂರುದಿನಗಳ ಹಿಂದೆ ಬಾಷಾಸಾಬ್ ನಮ್ಮ ಮನೆಗೆ ಬಂದು ನಮ್ಮ ಮಗಳನ್ನು  ಪ್ರೀತಿ ಮಾಡಲು ಬಿಡಲ್ಲ ಎಂದು ಅವಾಜ್ ಹಾಕಿದ್ದ ಎಂದು ಆರೋಪ ಮಾಡಿದ್ದಾರೆ.

ಶಿವಮೊಗ್ಗ ಆಹಿಲ್ ಸೆಂಟರ್ ನ ಮಾಲಿಕ ಮಗನಾದ ಶಾಹಿದ್ ಜೊತೆ ಜಗಳವಾಗಿತ್ತು. ಇವರಿಬ್ಬರೆ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಕೊಲೆಯಾದ ವ್ಯಕ್ತಿಯ ತಂದೆ ಆರೋಪ ಮಾಡಿದ್ದಾರೆ. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗ್ರಾಮ ವಾಸ್ತವ್ಯಕ್ಕೆ ಹೆಚ್ಚುತ್ತಿರುವ ಅಪಸ್ವರ