Select Your Language

Notifications

webdunia
webdunia
webdunia
webdunia

ಪತ್ನಿಯ ತಂಗಿಯ ಮೇಲೆ ಹೆಚ್ಚು ಆಸೆ ಆಗುತ್ತಿದೆ…

ಪತ್ನಿಯ ತಂಗಿಯ ಮೇಲೆ ಹೆಚ್ಚು ಆಸೆ ಆಗುತ್ತಿದೆ…
ಬೆಂಗಳೂರು , ಶನಿವಾರ, 15 ಜೂನ್ 2019 (17:18 IST)
ಪ್ರಶ್ನೆ: ನಾನು 28 ವರ್ಷದ ಯುವಕ. ಮದುವೆಯಾಗಿ ಒಂದು ವರ್ಷವಾಗುತ್ತಿದೆ. ನನ್ನ ಪತ್ನಿಯ ತಂಗಿ ನೋಡೋಕೆ ಸುಂದರವಾಗಿದ್ದಾಳೆ. ವಯಸ್ಸಿಗೆ ತಕ್ಕಂತೆ ದೇಹಸೌಂದರ್ಯವೂ ಸಮೃದ್ಧವಾಗಿದೆ. ನಮ್ಮ ಮನೆಗೆ ಬಂದಾಗ ನನ್ನ ಪತ್ನಿಗಿಂತಲೂ ಆಕೆಯ ತಂಗಿಯ ಮೇಲೆಯೇ ನನಗೆ ಪ್ರೀತಿ ಜಾಸ್ತಿಯಾಗುತ್ತಿದೆ. ಏನ್ಮಾಡಲಿ?

ಉತ್ತರ: ಮದುವೆಗೂ ಹಾಗೂ ಆಕರ್ಷಣೆಗೂ ಇರುವ ವ್ಯತ್ಯಾಸ ಹಾಗೂ ಸಂಬಂಧಗಳಿಗೆ ಬೆಲೆ ಕೊಡುವುದನ್ನು ಮೊದಲು ಕಲಿಯಿರಿ. ಮದುವೆಯಾಗಿ ಒಂದು ವರ್ಷ ಕೂಡ ಆಗಿಲ್ಲ. ನಿಮ್ಮ ಪತ್ನಿಯನ್ನು ಜೀವನಪೂರ್ಣ ಸುಂದರವಾಗಿ ನೋಡಿಕೊಳ್ಳಬೇಕಾದವರು ನಿವೇ ಆಗಿದ್ದೀರಿ. ವಿದ್ಯಾವಂತರಾಗಿರುವ ನೀವು ನಿಮ್ಮ ಪತ್ನಿಯ ತಂಗಿಯ ಬಾಹ್ಯ ಸೌಂದರ್ಯಕ್ಕೆ ಆಕೆಯ ಮೈಮಾಟಕ್ಕೆ ಮರುಳಾಗಿದ್ದೀರಿ.

ಅವಳನ್ನು ಲವ್ ಮಾಡಿದರೆ ಅಥವಾ ಆ ವಿಷಯಕ್ಕೆ ಹೋದರೂ ಸಹ ನೀವು ನಿಮ್ಮ ಸುಂದರವಾದ ಬಾಳನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಈ ರೀತಿಯ ನಿಲುವು ಎರಡು ಕುಟುಂಬವನ್ನು ಒಡೆಯಬಹುದಾಗಿದೆ. ಹೀಗಾಗಿ ನಿಮ್ಮ ಪತ್ನಿಯ ತಂಗಿಯ ಸಹವಾಸ ಬಿಡುವುದು ಒಳಿತು.

Share this Story:

Follow Webdunia kannada

ಮುಂದಿನ ಸುದ್ದಿ

ಸುಖ ಪಡೋವಾಗ ನೋವು ಅಂತಾಳೆ