Select Your Language

Notifications

webdunia
webdunia
webdunia
webdunia

ನಾನು ಯಾಕೆ ಸಿಎಂ ಆಗಬಾರದು: ಏನಿದು ಬಸನಗೌಡ ಪಾಟೀಲ್ ಮಾತಿನ ಮರ್ಮ

ನಾನು ಯಾಕೆ ಸಿಎಂ ಆಗಬಾರದು: ಏನಿದು ಬಸನಗೌಡ ಪಾಟೀಲ್ ಮಾತಿನ ಮರ್ಮ

Sampriya

ಬಾಗಲಕೋಟೆ , ಶನಿವಾರ, 7 ಡಿಸೆಂಬರ್ 2024 (16:58 IST)
ಬಾಗಲಕೋಟೆ: ರಾಜ್ಯ ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ ಬಣದ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ನಾನು ಮುಖ್ಯಮಂತ್ರಿ ಯಾಕೆ ಆಗಬಾರದು? ನನ್ನಲ್ಲಿ ಏನು ಕೊರತೆ ಇದೆ? ಪ್ರಾಮಾಣಿಕರನ್ನ ಸಿಎಂ ಮಾಡಬೇಕು ಅಂದ್ರೆ ಮೊದಲು ನನ್ನ ಹೆಸರೇ ಬರುತ್ತೆ. ಒಳ್ಳೆಯ ಮನುಷ್ಯ ಸಿಎಂ ಆಗಬೇಕು ಅಂತ ದೇವರು ಆದೇಶ ಕೊಟ್ಟರೆ ನಾನೇ ಸಿಎಂ ಆಗ್ತೀನಿ. ಇಲ್ಲದಿದ್ದರೆ ನನ್ನ ಪಾಡಿಗೆ ಇದ್ದು ಬಿದ್ತೀನಿ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.

ನನ್ನ ಮೇಲೆ ಭ್ರಷ್ಟಾಚಾರ, ಹಗರಣದ ಸುಳಿವು ಇರುತ್ತಿದ್ದರೆ ಸುಮ್ಮನೇ ಬಿಡುತ್ತಿದ್ದರೆ. ಈ ಹಿಂದೆ ನನ್ನ ಮೇಲೆಯೂ ದಾಳಿ ನಡೆದಿದೆ. ಆದರೆ ಏನೂ ಸಿಗಲಿಲ್ಲ. ನನ್ನ ಮೇಲೆ  ಆ ಭಗವಂತ ಕೃಪೆ, ಜನರ ಶಕ್ತಿ ಇದೆ ಎಂದರು.  

ಬೆಂಗಳೂರಲ್ಲಿಂದು  ಕೋರ್ ಕಮೀಟಿ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋರ್ ಕಮೀಟಿ ಮಾಡಲಿ, ನನ್ನ ಯಾಕೆ ಕೋರ್ ಕಮೀಟಿ ಸಭೆಗೆ ಕರೆಯಬೇಕು ನಾನು ಕೋರ್ ಕಮೀಟಿ ಮೆಂಬರ್ ಅಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಸಾಮಾನ್ಯ ಎಂಎಲ್‌ಎ ಅಷ್ಟೇ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂಗೆ 2023ರಲ್ಲಿ ಬಳ್ಳಾರಿ ಮೇಲಿದ್ದ ಪ್ರೀತಿ ಈಗ ಎಲ್ಲೋಯ್ತು: ಪ್ರಹ್ಲಾದ್‌ ಜೋಶಿ ಪ್ರಶ್ನೆ