Webdunia - Bharat's app for daily news and videos

Install App

ಸಚಿವರಿಗೆ ವರ್ಗಾವಣೆಯ ಅಧಿಕಾರ ಯಾಕೆ ಬೇಕು?

Webdunia
ಶುಕ್ರವಾರ, 26 ನವೆಂಬರ್ 2021 (16:56 IST)
ಬೆಂಗಳೂರು :   ವಿವಿಧ ಇಲಾಖೆಗಳಲ್ಲಿನ ಬಿ, ಸಿ ಹಾಗೂ ಡಿ ದರ್ಜೆಯ ಅಧಿಕಾರಿ ಮತ್ತು ನೌಕರರ ವರ್ಗಾವಣೆ ಮಾಡಲು ಇಲಾಖಾ ಸಚಿವರಿಗೆ  ಕೆಲವು ಷರತ್ತುಗಳೊಂದಿಗೆ ಒಂದು ತಿಂಗಳ ಸೀಮಿತ ಅವಧಿಯ ಅಧಿಕಾರ ನೀಡಿ ರಾಜ್ಯ ಸರ್ಕಾರ ಹೆಚ್ಚುವರಿ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿದೆ.
ಇದರಡಿ ಒಟ್ಟು ಸಿಬ್ಬಂದಿಯ ಶೇ.6ರಷ್ಟು ಮೀರದಂತೆ ಗ್ರೂಪ್-ಬಿ, ಗ್ರೂಪ್-ಸಿ ಹಾಗೂ ಡಿ ಗ್ರೂಪ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಲಭ್ಯವಿರುವ ಖಾಲಿ ಸ್ಥಾನಗಳಿಗೆ ಮಾತ್ರ ವರ್ಗಾವಣೆ ಮಾಡಬಹುದು. ಹಾಲಿ ಹುದ್ದೆಯಲ್ಲಿ ತಮ್ಮ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿ, ಸಿಬ್ಬಂದಿಯ ವರ್ಗಾವಣೆ ಮಾತ್ರ ಅನುಮೋದಿಸಬೇಕೆಂದು ಷರತ್ತು ವಿಧಿಸಲಾಗಿದೆ.
ಈ ನಿಯಮ ಒಂದು ತಿಂಗಳವರೆಗೆ ಮಾತ್ರ ಅನ್ವಯವಾಗಲಿದ್ದು ಬಳಿಕ ಮುಂದಿನ ಸಾರ್ವತ್ರಿಕ ವರ್ಗಾವಣೆವರೆಗೆ ಯಾವುದೇ ಅವಧಿ ಪೂರ್ವ ವರ್ಗಾವಣೆ ಮಾಡುವಂತಿಲ್ಲ. ಮುಖ್ಯಮಂತ್ರಿಗಳಿಗೂ  ವರ್ಗಾವಣೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಮಾರ್ಗಸೂಚಿ ಯಲ್ಲಿ ಸ್ಪಷ್ಟಪಡಿಸಲಾಗಿದೆ.
ವರ್ಗಾವಣೆ ಮಾರ್ಗಸೂಚಿ ಅನ್ವಯ ಕೆಲವು ವಿಶೇಷ ಪ್ರಕರಣಗಳಲ್ಲಿ ಹಾಗೂ ಸಾರ್ವತ್ರಿಕ ವರ್ಗಾವಣೆ ನಂತರ ಮಾಡುವ ವರ್ಗಾವಣೆಗಳಿಗೆ ಸಿಎಂರಿಂದ ಅನುಮೋದನೆ ಪಡೆವುದು ಕಡ್ಡಾಯವಾಗಿತ್ತು. ಆದರೆ, ಇದೀಗ ಮುಖ್ಯ ಮಂತ್ರಿಗಳ ಅನುಮೋದನೆಗೆ ಸಲ್ಲಿಸಿರುವ ಬಹುತೇಕ ವರ್ಗಾವಣೆಗಳು ನಿಯಮಿತ (ರೆಗ್ಯುಲರ್) ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳು.
 ಹೀಗಾಗಿ ಲಭ್ಯವಿರುವ ಖಾಲಿ ಸ್ಥಾನಗಳಿಗೆ ಮಾತ್ರ ತಮ್ಮ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆಗಳನ್ನು ಅನುಮೋದಿಸಲು ಆಯಾ ಇಲಾಖೆ ಸಚಿವರಿಗೆ ಅಧಿ ಕಾರ ನೀಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಕ್ಷಿಣ ಕನ್ನಡದಲ್ಲಿ 20 ನಕಲಿ ವೈದ್ಯರ ವಿರುದ್ಧ ಕೇಸ್‌, ಕ್ಲಿನಿಕ್‌ಗೆ ಬೀಗ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಬಿಗ್ ಶಾಕ್

ಎಂಥ ಪರಿಸ್ಥಿತಿಯಲ್ಲಿ ಕೂಡ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡೋಕೆ ಹೋಗಬೇಡಿ, Video

40ವರ್ಷದಿಂದ ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಶಿವಕುಮಾರ್‌ ಯಾರೆಂಬುದೇ ಗೊತ್ತಿಲ್ಲ: ಬಿಜೆಪಿ ಲೇವಡಿ

ಅಂಗಡಿ ಮುಂದೆ ಚಾಕಲೇಲ್‌ಗೆಂದು ನಿಂತಿದ್ದ ಇಬ್ಬರು ಮಕ್ಕಳು: ಟ್ರ್ಯಾಕ್ಟರ್ ಚಾಲಕನ ನಿರ್ಲ್ಯಕ್ಷಕ್ಕೆ ಪ್ರಾಣವೇ ಹೋಯ್ತು

ಮುಂದಿನ ಸುದ್ದಿ
Show comments