Daily Horoscope
✕

ಏರ್ಟೆಲ್​ನಿಂದ ಇದೀಗ ಬಂಪರ್ ಆಫರ್!

Webdunia
ಶುಕ್ರವಾರ, 26 ನವೆಂಬರ್ 2021 (16:01 IST)
ಏರ್ಟೆಲ್ ಇದೀಗ ಬಂಪರ್ ಆಫರ್ ಒಂದನ್ನು ಪರಿಚಿಯಿಸಿದೆ. ಮೊನ್ನೆಯಷ್ಟೆ ಏರ್ಟೆಲ್ ನವೆಂಬರ್ 26 ರಿಂದ ತನ್ನ ಪ್ರಿಪೇಯ್ಡ್ ಪ್ಲಾನ್ಗಳ ದರ ಹೆಚ್ಚಳ ಮಾಡುವುದಾಗಿ ಹೇಳಿತ್ತು.
ಅದರಂತೆ ಇಂದಿನಿಂದ ಹೊಸ ಬೆಲೆಗಳು ಅನ್ವಯ ಆಗಲಿವೆ. ಹೀಗಿರುವಾಗ ಏರ್ಟೆಲ್ನ ಪ್ರಿಪೇಯ್ಟ್ ಯೋಜನೆಗಳು ದರ ಏರಿಕೆ ಕಂಡ ಬೆನ್ನಲ್ಲೇ ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ.
ಹೌದು, ಏರ್ಟೆಲ್ ಪ್ರಿಪೇಯ್ಡ್ ಯೋಜನೆಗಳು ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500 MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಬಹುದು. ಆದರೆ, ಕಂಪನಿ ಇದಕ್ಕೊಂದು ಟ್ವಿಸ್ಟ್ ನೀಡಿದೆ.
ಏರ್ಟೆಲ್ ತನ್ನ ನಾಲ್ಕು ಪ್ರಿಪೇಯ್ಡ್ ಯೋಜನೆಗಳ ಡೇಟಾ ಪ್ರಯೋಜನಗಳನ್ನು 500 MB ಉಚಿತ ಡೇಟಾದೊಂದಿಗೆ ನವೀಕರಿಸಿದೆ. ಅಂದರೆ, ಏರ್ಟೆಲ್ನ ರೂ. 719, ರೂ. 299, ರೂ. 265 ಮತ್ತು ರೂ. 839 ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500 MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ.
ಆದರೆ, ಈ 500 MB ಡೇಟಾ ಆಫರ್ ಅನ್ನು ಗ್ರಾಹಕರು ರಿಡೀಮ್ ಮಾಡಿಕೊಳ್ಳಬೇಕಿದೆ. ಅಂದರೆ ಈ ನಾಲ್ಕು ಯೋಜನೆಗಳಲ್ಲಿ ಒಂದು ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡ ನಂತರ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಗ ಈ ಆ್ಯಪ್‌ನಲ್ಲಿ 500 MB ಉಚಿತ ಡೇಟಾವನ್ನು ರಿಡೀಮ್ ಮಾಡಿಕೊಳ್ಳುವ ಅಯ್ಕೆ ಕಾಣಿಸಲಿದೆ. ಈ ಮೂಲಕ ಉಚಿತವಾಗಿ 500 MB ಹೆಚ್ಚುವರಿ ದೈನಂದಿನ ಡೇಟಾವನ್ನು ಪಡೆಯಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನೆ ನಡೆವಾಗ ತೋಳ, ನರಿ ಹೋಗುವಂತೆ: ಯಡಿಯೂರಪ್ಪ, ದೇವೇಗೌಡ ಭೇಟಿ ಕುರಿತು ಹರಿಪ್ರಸಾದ್ ವ್ಯಂಗ್ಯ

ನೀ ಯಾರಾದ್ರೆ ನಂಗೇನು… ನುಂಗಿಬಿಡುತ್ತೇನೆ ಎಂದು ಮನೆಯಂಗಳಕ್ಕೆ ಬಂದಿದ್ದ ಚಿರತೆ ನೋಡಿ ನಾಯಿ ಮಾಡಿದ್ದೇನು ನೋಡಿ Video

ಎಲ್ ಕೆಜಿ ಮಗುವಿನ ಮೇಲೆ 3 ನೇ ತರಗತಿಯ ಬಾಲಕ ಇಟ್ಟಿಗೆಯಿಂದ ಹೊಡೆದು ಕ್ರೌರ್ಯ: ಗಟ್ಟಿ ಹೃದಯವಿದ್ದರೆ ಮಾತ್ರ ಶಾಕಿಂಗ್ ವಿಡಿಯೋ ನೋಡಿ Video

ವೆಜ್ ಬಿರಿಯಾನಿ ಕೇಳಿದ್ರೆ ಅಪ್ಪಟ ಸಸ್ಯಾಹಾರಿಗಳಿಗೆ ಚಿಕನ್ ಬಿರಿಯಾನಿ ಕೊಟ್ರು: ರೆಸ್ಟೋರೆಂಟ್ ವಿರುದ್ಧ ರೊಚ್ಚಿಗೆದ್ದ ಕುಟುಂಬ Video

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಐವರು ಕನ್ನಡಿಗರ ದುರ್ಮರಣ: ಮಹತ್ವದ ಅಪ್ ಡೇಟ್ ಇಲ್ಲಿದೆ

ಮುಂದಿನ ಸುದ್ದಿ
Show comments