Publish Date: Wed, 10 Nov 2021 (14:50 IST)
Updated Date: Wed, 10 Nov 2021 (14:53 IST)
ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಮಹತ್ವ ಸುತ್ತೋಲೆ ಹೊರಡಿಸಿದೆ. ಹೈಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕರಣಗಳಲ್ಲಿ ಸರ್ಕಾರದ ಪರ ಖುದ್ದಾಗಿ ಹಾಜರಾಗುವಂತೆ ಆದೇಶ ಹೊರಡಿಸಿದೆ.
ನ್ಯಾಯಾಲಯ ಅಧಿಕಾರಿಗಳಿಗೆ ಖುದ್ದು ಹಾಜರಾಗುವಂತೆ ಆದೇಶ ಮಾಡಿದಾಗ ಗೈರಾಗುವಂತಿಲ್ಲ, ಅನಾರೋಗ್ಯ ಇತರ ತುರ್ತು ಕಾರಣಗಳಿಂದ ಹಾಜರಾಗಲು ಆಗದಿದ್ದಲ್ಲಿ ಮೊದಲೇ ಅಧಿಕಾರಿಗಳಿಗೆ ಸರ್ಕಾರಿ ವಕೀಲರಿಗೆ ತಿಳಿಸಬೇಕು ಅಂತ ಸೂಚನೆ ನೀಡಿದೆ. ಮುಖ್ಯ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದು, ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.