ಬೆಂಗಳೂರು: ವ್ಯಾಟ್ಸಪ್ ನಲ್ಲಿ ಕೆಲವು ದಿನಗಳ ಮಟ್ಟಿಗೆ ಕೊರೋನಾವೈರಸ್ ಬಗ್ಗೆ ಯಾವುದೇ ಸಂದೇಶ ಫಾರ್ವರ್ಡ್ ಮಾಡದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
									
										
								
																	
ಇದರ ಹಿಂದಿನ ಕಾರಣವೇನು ಗೊತ್ತಾ? ಕೊರೋನಾ ಕುರಿತು ಸತ್ಯ ಸಂಗತಿಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳೇ ಹೆಚ್ಚು ಫಾರ್ವರ್ಡ್ ಆಗುತ್ತಿವೆ. ಇದೇ ಕಾರಣಕ್ಕೆ ಸುಳ್ಳು ಸುದ್ದಿ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ.
									
			
			 
 			
 
 			
			                     
							
							
			        							
								
																	ಹೀಗಾಗಿ ಎಲ್ಲಾ ಗ್ರೂಪ್ ಆಡ್ಮಿನ್ ಗಳಿಗೆ ಎಚ್ಚರಿಕೆ ನೀಡಲಾಗಿದೆ. ತಪ್ಪು ಸಂದೇಶ, ಸಮಾಜದಲ್ಲಿ ಅಹಿತಕರ ವಾತಾವರಣ ಸನ್ನಿವೇಶ ಸೃಷ್ಟಿಸುವ ಸಂದೇಶ ರವಾನಿಸಿದರೆ ಗ್ರೂಪ್ ಆಡ್ಮಿನ್ ಗಳು ಹೊಣೆ ಹೊರಬೇಕಾಗುತ್ತದೆ.