Select Your Language

Notifications

webdunia
webdunia
webdunia
webdunia

ಮಲೇರಿಯಾ ಔಷಧಿ ಮೇಲಿನ ನಿರ್ಬಂಧ ಸಡಿಲಿಸಿದ ಭಾರತ

ಮಲೇರಿಯಾ ಔಷಧಿ ಮೇಲಿನ ನಿರ್ಬಂಧ ಸಡಿಲಿಸಿದ ಭಾರತ
ನವದೆಹಲಿ , ಮಂಗಳವಾರ, 7 ಏಪ್ರಿಲ್ 2020 (10:36 IST)
ನವದೆಹಲಿ: ಕೊರೋನಾ ನಿಯಂತ್ರಿಸಲು ಹೆಣಗಾಡುತ್ತಿರುವ ಅಮೆರಿಕಾ ಈಗ ಮಲೇರಿಯಾ ಔಷಧಕ್ಕಾಗಿ ಭಾರತದ ಬಳಿ ಬೇಡಿಕೆಯಿಟ್ಟ ಬೆನ್ನಲ್ಲೇ ಭಾರತ ಮಲೇರಿಯಾ ಔಷಧಿಗಳ ಮೇಲಿನ ನಿರ್ಬಂಧ ಕೊಂಚ ಮಟ್ಟಿಗೆ ಸಡಿಲಗೊಳಿಸಿದೆ.


ಭಾನುವಾರ ಭಾರತದ ಪ್ರಧಾನಿ ಮೋದಿ ಜತೆ ದೂರವಾಣಿ ಮಾತುಕತೆ ನಡೆಸಿದ್ದ ಟ್ರಂಪ್ ಮಲೇರಿಯಾಗೆ ನೀಡುವ ಔಷಧ ಹೈಡ್ರೋಕ್ಸಿಕ್ಲೋರೋಕ್ಸಿನ್ ತಮ್ಮ ದೇಶಕ್ಕೆ ಒದಗಿಸುವಂತೆ ಮನವಿ ಮಾಡಿದ್ದರು. ಒಂದು ವೇಳೆ ಭಾರತ ತಮ್ಮ ಮನವಿಯನ್ನು ಪುರಸ್ಕರಿಸದೇ ಹೋದಲ್ಲಿ ಅದಕ್ಕೆ ತಕ್ಕ ಪ್ರತೀಕಾರ ತೀರಿಸಲೂ ಹಿಂದೆ ಮುಂದೆ ನೋಡಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದರು.

ಆದರೆ ಭಾರತ ಕಾರಣಾಂತರಗಳಿಂದ ಮಾರ್ಚ್ ನಲ್ಲೇ ಹೈಡ್ರೋಕ್ಸಿಕ್ಲೋರೋಕ್ಸಿನ್ ಮತ್ತು ಪ್ಯಾರಾಸಿಟಮಲ್ ಔಷಧಗಳ ರಫ್ತಿಗೆ ನಿರ್ಬಂಧ ವಿಧಿಸಿತ್ತು. ಇದೀಗ ರಫ್ತು ಮಾಡಲು ಅವಕಾಶ ನೀಡದೇ ಇದ್ದರೂ ಮುಂದಿನ ದಿನಗಳಲ್ಲಿ ಭಾರತದಲ್ಲಿನ ಲಭ್ಯತೆ ನೋಡಿಕೊಂಡು ರಫ್ತು ಮಾಡಲು ಅವಕಾಶ ನೀಡುವ ಸಾಧ‍್ಯತೆ ಇಲ್ಲದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಶಂಕೆ; ಮುಂಬೈನಲ್ಲಿ 170 ಪೊಲೀಸರನ್ನು ಕ್ವಾರಂಟೈನಲ್ಲಿಡಲು ಸೂಚನೆ