ಆ ಕೆರೆಯಲ್ಲಿ ತೇಲಿದ್ದು ಯಾರ ಹೆಣ?

ಸೋಮವಾರ, 20 ಮೇ 2019 (14:31 IST)
ವ್ಯಕ್ತಿಯೊಬ್ಬನ ಹೆಣ ಕೆರೆಯಲ್ಲಿ ತೇಲಿಬಂದ ಘಟನೆ ನಡೆದಿದೆ.

ಉತ್ತರ ಕನ್ನಡದ ಯಲ್ಲಾಪುರದ ನಾಯಕನ ಕೆರೆಯಲ್ಲಿ  ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.

ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ಕೆರೆಯಲ್ಲಿ ಹಾರಿ ಮೃತಪಟ್ಟ ಘಟನೆ ನಡೆದಿದೆ ಎನ್ನಲಾಗಿದೆ.

ಯಲ್ಲಾಪುರ ಪಟ್ಟಣದ ಹುಲ್ಲೋರಮನೆಯ ನಿವಾಸಿ ಮಂಜುನಾಥ ಗಣಪತಿ ಶೆಟ್ಟಿ (45) ಮೃತ ವ್ಯಕ್ತಿ. ಈತ ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ರಾತ್ರಿ 3 ಘಂಟೆಗೆ ಎದ್ದು ಹೊರ ಹೋಗಿದ್ದವನು.

ಈಗ ನಾಯಕನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ತಕ್ಷಣ ಅಗ್ನಿಶಾಮದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 30 ಸಂಘಟನೆಗಳಿಂದ ಬಂದ್; ಜನರ ಪರದಾಟ