30 ಸಂಘಟನೆಗಳಿಂದ ಬಂದ್; ಜನರ ಪರದಾಟ

ಸೋಮವಾರ, 20 ಮೇ 2019 (14:25 IST)
ಕೃಷ್ಣಾ ನದಿ ನೀರು ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಜನರು ಪರದಾಡುವಂತಾಗಿದೆ.

ನಸುಕಿನಿಂದಲೇ ಚಿಕ್ಕೋಡಿಯ ಅಥಣಿ ಬಂದ್ ಆಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್ ಸಂಚಾರ ಇಲ್ಲದ ಕಾರಣ 108 ವಾಹನದಲ್ಲಿ ತೆರಳಿದ್ದಾರೆ ರೋಗಿಗಳು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಾವು ಪಡೆದುಕೊಂಡಿದೆ. ಶಾಶ್ವತ ಕುಡಿಯುವ ನೀರಿನ ಪರಿಹಾರಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಇದಾಗಿದೆ.

ಮೂವತ್ತಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು  ಏಕಕಾಲಕ್ಕೆ ಬಂದ್ ಕರೆ ನೀಡಿದ್ದು ಬಂದ್ ಬಹುತೇಕ ಯಶಸ್ವಿಯಾಗಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಚ್ಚರಿ: ಬ್ರಿಡ್ಜ್ ಗೆ ಕಾರು ಢಿಕ್ಕಿಯಾಗಿ ಉರುಳಿಬಿದ್ರೂ ಬದುಕಿದ್ರು