ನಾಯಿಗೆ ಅಧಿಕಾರಿಗಳ ಹೆಸರಿಟ್ಟಿದ್ದಕ್ಕೆ ವ್ಯಕ್ತಿಗೆ ಆದ ಗತಿಯೇನು ಗೊತ್ತಾ?

ಶುಕ್ರವಾರ, 17 ಮೇ 2019 (07:21 IST)
ಚೀನಾ : ನಾಯಿಗೆ ಅಧಿಕಾರಿಗಳ ಹೆಸರಿಟ್ಟಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿದ ಘಟನೆ ಚೀನಾದ ಯಿಂಗ್‌ ಜ್ಯೂ ಎನ್ನುವ ಪ್ರದೇಶದಲ್ಲಿ ನಡೆದಿದೆ.
ಚೀನಾದ ವ್ಯಕ್ತಿಯೊಬ್ಬ ತನ್ನ ನಾಯಿಗಳಿಗೆ ಚಿನ್ಘಾನ್ ಹಾಗೂ ಜೀಗುವಾನ್ ಎನ್ನುವ ಹೆಸರಿಟ್ಟಿದ್ದಾನೆ. ಆದರೆ ಈ ಎರಡು ಹೆಸರು ಚೀನಾದ ನಗರ ಪ್ರದೇಶದಲ್ಲಿ ವ್ಯವಸ್ಥೆ ನೋಡಿಕೊಳ್ಳುವ ಅಧಿಕಾರಿಗಳ ಹೆಸರಾಗಿತ್ತು. ತಮಾಷೆಗೆ ತನ್ನ ನಾಯಿಗಳಿಗೆ ಈತ ಇರಿಸಿದ್ದ ಹೆಸರುಗಳು ವೀಚಾಟ್ ಮೂಲಕ ಚೀನಾದಲ್ಲಿ ವೈರಲ್ ಆಗಿತ್ತು.


ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿ 10 ದಿನದ ಮಟ್ಟಿಗೆ ತನಿಖಾ ಕೇಂದ್ರದಲ್ಲಿ ಇರಿಸಿದ್ದಾರೆ. ಈ ವಿಚಾರದ ಬಗ್ಗೆ ನೆಟ್ಟಿಗರು ಬಾರೀ ವಿರೋಧ ವ್ಯಕ್ತಪಡಿಸಿದ್ದು ಯಾವ ಕಾನೂನಿನಲ್ಲಿ‌ ಈ ವ್ಯಕ್ತಿಯನ್ನು ಬಂಧಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಸ್ಟ್ರೇಲಿಯಾದಲ್ಲಿ ಪಾಸ್ಪೋರ್ಟ್ ಕಳೆದುಕೊಂಡರೆ ಮ್ಯಾಕ್‌ ಡೊನಾಲ್ಡ್ಸ್ ಗೆ ಭೇಟಿ ನೀಡಿ. ಯಾಕೆ ಗೊತ್ತಾ?