Select Your Language

Notifications

webdunia
webdunia
webdunia
Sunday, 6 April 2025
webdunia

ಲೋಕಸಭೆಯಲ್ಲಿ ಯಾರು ಬೀದಿಗೆ ಬರ್ತಾರೆ ತೋರಿಸ್ತೀವಿ : ಈಶ್ವರಪ್ಪ

ಲೋಕಸಭೆ
ಬೆಂಗಳೂರು , ಭಾನುವಾರ, 27 ಆಗಸ್ಟ್ 2023 (11:34 IST)
ಶಿವಮೊಗ್ಗ : ರಾಜ್ಯದ ಬಿಜೆಪಿ ನಾಯಕರು ಬೀದಿಗೆ ಬಂದಿದ್ದಾರೆ ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಲೋಕಸಭೆಯಲ್ಲಿ ಯಾರು ಬೀದಿಗೆ ಬರುತ್ತಾರೆ ತೋರಿಸುತ್ತೇವೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮೋದಿ ಪ್ರಧಾನಿ ಆಗುವುದೂ ಅಷ್ಟೇ ಸತ್ಯ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಜಗತ್ತಿನಲ್ಲಿ ಬಹಳ ಮುಂದಕ್ಕೆ ಹೋಗಿದೆ. ವಿಜ್ಞಾನದಲ್ಲೂ ಭಾರತ ಮುಂದುವರೆದಿದೆ. ಇವತ್ತು ಮೋದಿ ಮಾಡಿದ ಭಾಷಣ ಎಲ್ಲರೂ ಮೆಚ್ಚಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ 17 ಶಾಸಕರನ್ನು ಸೂರ್ಯ ಚಂದ್ರ ಇರುವವರೆಗೆ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಪಕ್ಷಕ್ಕೆ ಸೇರಿಸಿಕೊಳ್ಳಲು ಗುಂಪು ನಡೆಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಆಪರೇಷನ್ ಹಸ್ತ ವಿಚಾರವಾಗಿ ಮಾತನಾಡಿದ ಅವರು, ಯಾರೊಬ್ಬ ಎಂಎಲ್‌ಎ, ಎಂಎಲ್‌ಸಿ ಬಿಜೆಪಿಯಿಂದ ಹೋಗಿದ್ರೆ ತಿಳಿಸಿ. ಜೆಡಿಎಸ್‌ನಿಂದ ಹೋದವರ ಬಗ್ಗೆ ನಾನು ಹೇಳಲಾರೆ. ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು. ಕಾಂತೇಶ್ ಹಾವೇರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಸಿ ಪಾಟೀಲ್ ಆತ್ಮೀಯ ಸ್ನೇಹಿತರು. ಅವರ ಜೊತೆ ಕುಳಿತು ಮಾತನಾಡುತ್ತೇವೆ ಎಂದು ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸತ್ಯೇಂದ್ರ ಜೈನ್ ಜೈಲಲ್ಲಿ ಸ್ವಿಮ್ಮಿಂಗ್ ಪೂಲ್ ಕೇಳ್ತಿದ್ದಾರೆ : ಸುಪ್ರೀಂ ಕೋರ್ಟ್‌ಗೆ ED ಮಾಹಿತಿ