Select Your Language

Notifications

webdunia
webdunia
webdunia
webdunia

ತುಮಕೂರಿನ ಕ್ಷೇತ್ರದಲ್ಲಿ ಯಾರಾಗ್ತಾರೆ ಸಾಮ್ರಾಟ?

ತುಮಕೂರಿನ ಕ್ಷೇತ್ರದಲ್ಲಿ ಯಾರಾಗ್ತಾರೆ ಸಾಮ್ರಾಟ?
ತುಮಕೂರು , ಬುಧವಾರ, 19 ಏಪ್ರಿಲ್ 2023 (08:06 IST)
ತುಮಕೂರು : ತುಮಕೂರು ಜಿಲ್ಲೆಯಲ್ಲೇ ಕೊರಟಗೆರೆ ಅತಿ ಚಿಕ್ಕ ಕ್ಷೇತ್ರ. ಈ ವಿಧಾನಸಭಾ ಕ್ಷೇತ್ರ ಚಿಕ್ಕದಾದರೂ ಚುನಾವಣೆ ಹಾಗೂ ರಾಜಕೀಯ ವಿಚಾರದಲ್ಲಿ ರಾಜ್ಯದ ಗಮನ ಸೆಳೆಯುತ್ತಲೇ ಬಂದಿದೆ.
 
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಕೊರಟಗೆರೆಯಲ್ಲಿ ಪ್ರಸ್ತುತ ಚುನಾವಣಾ ರಾಜಕೀಯ ಬೆಳವಣಿಗೆ ಹೇಗಿದೆ ಎಂಬುದನ್ನು ನೋಡೋಣ. ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರಾನೇರ ಫೈಟ್ ಇದೆ. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ ಹಾಗೂ ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ ನಡುವೆ ಹಣಾಹಣಿ ನಡೆಯಲಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ಗೆ ಬಿಜೆಪಿ ಟಿಕೆಟ್ ನೀಡಿದ್ದು, ಜಿ.ಪರಮೇಶ್ವರ ನಿರಾಯಾಸ ಗೆಲುವಿಗೆ ತೊಡಕಾಗಿದೆ.  ಆದರೀಗ ತಮ್ಮದೇ ಸಮುದಾಯದ ಪ್ರಬಲ ವ್ಯಕ್ತಿ ಸ್ಪರ್ಧೆಗೆ ಇಳಿದಿರುವುದರಿಂದ ಎಡಗೈ ಸಮುದಾಯದ ಬಹುಪಾಲು ಮತಗಳು ಬಿಜೆಪಿ ಅಭ್ಯರ್ಥಿ ಕಡೆಗೆ ವಾಲಿ ಪರಮೇಶ್ವರಗೆ ಹಿನ್ನಡೆ ಆಗಬಹುದು. ಇದರ ಲಾಭ ಜೆಡಿಎಸ್ಗೆ ಆಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಷ್ಟೊಂದು ಪ್ರಚಾರದಲ್ಲಿ ತೊಡಗಿಲ್ಲ. ಜಿ.ಪರಮೇಶ್ವರ ಅವರು ಕಾಲಿಗೆ ಚಕ್ರಕಟ್ಟಿಕೊಂಡು ಮತದಾರರನ್ನು ತಲುಪುತ್ತಿದ್ದಾರೆ. ಜೆಡಿಎಸ್ ಇದೇ ರೀತಿ ಕ್ಷೀಣವಾಗಿದ್ದರೆ ಕಾಂಗ್ರೆಸ್ಗೆ ಗೆಲುವಿನ ಹಾದಿ ಸುಗಮವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮೋದ್ ಮುತಾಲಿಕ್‌ಗೆ ಕಾಸಿಗಿಂತ ಕೇಸೇ ಜಾಸ್ತಿ