Webdunia - Bharat's app for daily news and videos

Install App

ಕೊಡಗಿನ ಸಾಮರಸ್ಯವನ್ನು ಕೆಡಿಸುತ್ತಿರುವವರು ಯಾರು?

Webdunia
ಮಂಗಳವಾರ, 16 ನವೆಂಬರ್ 2021 (21:35 IST)
ಕೊಡಗಿನಲ್ಲಿ ಯಾಕೆ ಹೀಗಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ .ತಮಗೆ ಅನ್ಯಾಯವಾಗಿದೆ ಎಂದು ಶನಿವಾರ ಸಂತೆಯ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಕೆಲವು ಮಹಿಳೆಯರು ಮೊನ್ನೆಯ ದಿನ ಪ್ರತಿಭಟನೆ ನಡೆಸಿ ನ್ಯಾಯ ಬೇಕು ,ಅಂಬೇಡ್ಕರ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಅವರ ಕಡೆಯವರು ತಪ್ಪು ಮಾಡಿದ್ದಾರೋ ಅಥವಾ ನ್ಯಾಯವಾಗಿದ್ದಾರೋ ಎಂಬುದು ಪೋಲಿಸ್ ತನಿಖೆಯಲ್ಲಿ ಗೊತ್ತಾಗುತ್ತದೆ .ಏಕೆಂದರೆ ಕಾನೂನು ಇರುವುದೇ ನ್ಯಾಯ ಒದಗಿಸಲು.
ನಾನು ಮೊನ್ನೆ ದಿನ ಈ ವಿಡಿಯೋ ಗಮನಿಸಿದ್ದೀನಿ .ಹೌದು ಪ್ರತಿಯೊಬ್ಬರಿಗೂ ನ್ಯಾಯ ಬೇಕಾದಾಗ ನೆನಪಾಗುವುದು ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್. ಪ್ತತಿಯೊಬ್ಬ ಭಾರತೀಯರಿಗೆ ಸಮಾನತೆಯ ಹಕ್ಕನ್ನು ನೀಡುವ ಮಹಾನ್ ಸಂವಿಧಾನವನ್ನು ಅವರು ನಮಗೆ ನೀಡಿದ್ದಾರೆ ‌‌.ಹಾಗಾಗಿ ಅಂಬೇಡ್ಕರ್ ರವರಿಗೆ ಜೈ,ಅಂಬೇಡ್ಕರ್ ಜಿಂದಾಬಾದ್ ಅಂತ ಘೋಷಣೆ ಕೂಗುವುದು ಸಹಜ .ಅದೇ ಘಟನೆ  ಮೊನ್ನೆ ದಿನ ನಡೆದಿದೆ .
ಆದರೆ ಸಾಮಾಜಿಕ ಪಿಡುಗಾಗಿರುವ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಶನಿವಾರ ಸಂತೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ  ವಿಡಿಯೋ ಮಾಡಿ ಹೇಳಿದ್ದಾನೆ.
ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳೇ ಪಾಕಿಸ್ತಾನ ಜಿಂದಾಬಾದ್ ಎಂದು ಆ ಮಹಿಳೆಯರು ಹೇಳಿದ್ದರೆ ಅವರ ಮೇಲೆ ದೇಶ ದ್ರೋಹದ ಕೇಸ್ ಹಾಕಿ ಬಂಧಿಸಿ. ಅವರು ಆ ರೀತಿ ಘೋಷಣೆ ಕೂಗಲಿಲ್ಲ ಎಂದರೆ ಸುಳ್ಳು ಸುದ್ದಿ ಹರಡಿದ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಒದ್ದು ಜೈಲಿಗೆ ಹಾಕಿ .ಇವರು ಕೊಡಗಿನ ಜನರ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದಾರೆ .ಇಂತಹ ಸಾಮಾಜಿಕ ಕೆಟ್ಟ ಕ್ರಿಮಿಗಳನ್ನು  ಹೊಸಕಿ ಹಾಕದಿದ್ದರೆ ಕೊಡಗಿನ ಸ್ವಾಸ್ಥ್ಯ ವನ್ನು ಇವರು ಕೆಡಿಸುತ್ತಿರುತ್ತಾರೆ .

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರೆ: ಪ್ರತಾಪಸಿಂಹ ಪ್ರಶ್ನೆ

ಬಂಧನದ ಭೀತಿಯಲ್ಲೇ ಬೆಳ್ತಂಗಡಿ ಠಾಣೆಗೆ ಮೂರು ವಕೀಲರೊಂದಿಗೆ ವಿಚಾರಣೆಗೆ ಹಾಜರಾದ ಸಮೀರ್‌

ಬಿಹಾರ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಪಟ್ಟಿಯಲ್ಲಿ ಪಾಕ್‌ನ ಎರಡು ಪ್ರಜೆಗಳ ಹೆಸರು ಪತ್ತೆ

ಗಡಿ ಮೀರಿ ಬಂದಿದ್ದ ಪಾಕಿಸ್ತಾನದ 15 ಮೀನುಗಾರರನ್ನು ಸೆರೆಹಿಡಿದ ಬಿಎಸ್‌ಎಫ್‌

ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬೆಳ್ತಂಗಡಿ ಠಾಣೆಯಲ್ಲಿ ದೂತ ಸಮೀರನ ವಿಚಾರಣೆ ಇಂದು

ಮುಂದಿನ ಸುದ್ದಿ
Show comments