Select Your Language

Notifications

webdunia
webdunia
webdunia
webdunia

ಪಾಕ್ ಪಂದ್ಯದ ವೇಳೆ ಸಾನಿಯಾ ಮಿರ್ಜಾ ಹಾಜರ್: ಟ್ರೋಲ್ ಆದ ಟೆನಿಸ್ ತಾರೆ

ಪಾಕ್ ಪಂದ್ಯದ ವೇಳೆ ಸಾನಿಯಾ ಮಿರ್ಜಾ ಹಾಜರ್: ಟ್ರೋಲ್ ಆದ ಟೆನಿಸ್ ತಾರೆ
ದುಬೈ , ಶುಕ್ರವಾರ, 12 ನವೆಂಬರ್ 2021 (10:06 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ನಿನ್ನೆಯ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆಗಮಿಸಿದ್ದರು.

ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಗೆ ಚಿಯರ್ ಮಾಡಲು ಸಾನಿಯಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಸಾನಿಯಾ ಪಾಕ್ ತಂಡದ ಕ್ರಿಕೆಟಿಗರ ಆಟಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದು ಕೆಲವು ಭಾರತೀಯ ಸಮರ್ಥಕರಿಗೆ ಇಷ್ಟವಾಗಿಲ್ಲ.

ಸಾನಿಯಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ನೀವು ಪಾಕ್ ತಂಡಕ್ಕೆ ಸೇರಿಕೊಳ್ಳಿ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ. ಇನ್ನು, ಕೆಲವರು ನಮ್ಮ ಶತ್ರು ರಾಷ್ಟ್ರದ ಸೋಲನ್ನು ಸಾನಿಯಾ ಸಂಭ್ರಮಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಟ್ರೋಲ್ ಆಗುವ ಕಾರಣಕ್ಕೇ ಸಾನಿಯಾ ಭಾರತ-ಪಾಕ್ ಪಂದ್ಯಗಳಿಂದ ದೂರವೇ ಇರುತ್ತಾರೆ. ಆದರೆ ಈ ಬಾರಿ ಮೈದಾನಕ್ಕೆ ಬಂದು ಟ್ರೋಲ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ನಾಯಕತ್ವದಿಂದಲೂ ಕೊಹ್ಲಿಗೆ ಕೊಕ್ ಸಾಧ್ಯತೆ