Select Your Language

Notifications

webdunia
webdunia
webdunia
webdunia

ವೈಟ್ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ

ವೈಟ್ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ
bangalore , ಬುಧವಾರ, 23 ನವೆಂಬರ್ 2022 (16:13 IST)
ಒಂದು ಕಾಲದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ರಾಜನಂತೆ ಮೆರೆದಾಡಿದ ವೋಲ್ವೋ ಬಸ್ಗಳು ಈಗ ಮೂಲೆ ಸೇರಿವೆ. ಅಳಿದುಳಿದ ಬಸ್ಗಳೂ ಐಟಿ, ಬಿಟಿ ಮಂದಿಯನ್ನು ನಂಬಿ ರಸ್ತೆಗಿಳಿಯುತ್ತಿವೆ. ಆದರೆ ಇದೀಗ ಈ ಐಟಿ ಮಂದಿಯೂ ಮೆಟ್ರೋ ದತ್ತ ಮುಖಮಾಡೋದು ಖಚಿತವಾಗ್ತಿದ್ದಂತೆ, ಬಿಎಂಟಿಸಿಗೆ ಹೊಸ ಟೆಂಕ್ಷನ್ ಶುರುವಾಗಿದೆ.
ಸದ್ಯ ಬಿಎಂಟಿಸಿ ಬಳಿ 750 ಐಷಾರಾಮಿ ವೋಲ್ವೋ ಬಸ್ಗಳಿವೆ. ಇವುಗಳ ಪೈಕಿ ರಸ್ತೆಗಿಳಿಯುತ್ತಿರೋದು ಕೇವಲ 250 ಮಾತ್ರ. ಈ 250 ಬಸ್ಗಳು ಓಡ್ತಿರೋದು ಐಟಿ ಬಿಟಿ ಕಾರಿಡಾರ್ನಲ್ಲಿ. ಆದರೆ ಇದೀಗ ಈ ಐಟಿ, ಬಿಟಿ ಕಾರಿಡಾರ್ನತ್ತ ಮೆಟ್ರೋ ಮುಖಮಾಡುತ್ತಿದೆ. ಈಗಾಗಲೇ ವೈಟ್ಫೀಲ್ಡ್ ಮಾರ್ಗದಲ್ಲಿ ಟ್ರಯಲ್ ರನ್ ಆರಂಭಿಸಿರುವ ಮೆಟ್ರೋ ಮುಂದಿನ ವರ್ಷಾರಂಭದಲ್ಲೇ ವಾಣಿಜ್ಯ ಸಂಚಾರವನ್ನೂ ಆರಂಭಿಸುವ ಉತ್ಸಾಹದಲ್ಲಿದೆ. ಹೀಗಾಗಿ ಬಿಎಂಟಿಸಿಗೆ ಹೊಸ ಬಗೆಯ ಟೆಂಕ್ಷನ್ ಶುರುವಾಗಿದೆ.
ಈ ಹಿಂದೆ ಬಿಎಂಟಿಸಿ ಪ್ರತಿನಿತ್ಯ ಸರಿ ಸುಮಾರು 50 ಲಕ್ಷದವರೆಗೂ ಪ್ರಯಾಣಿಕರನ್ನ ಹೊಂದಿತ್ತು. ಆದರೆ ಕೋವಿಡ್ ಬಳಿಕ ಈ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿ ಕೇವಲ 30 ರಿಂದ 35 ಲಕ್ಷಕ್ಕೆ ಬಂದು ನಿಂತಿದೆ. ಇನ್ನೊಂದ್ಕಡೆಯಲ್ಲಿ ಮೆಟ್ರೋ ವಿಸ್ತರಣೆ ಆಗ್ತಿರೋದು ಸಹ ಬಿಎಂಟಿಸಿಗೆ ದೊಡ್ಡ ಹೊಡೆತ ಕೊಡುತ್ತಲೇ ಬಂದಿದೆ. 
ಈಗ ಐಟಿ ಕಾರಿಡಾರ್ಗೂ ಮೆಟ್ರೋ ಬಂದಿದ್ದೇ ಆದರೆ ಬಿಎಂಟಿಸಿ ಪ್ರಯಾಣಿಕರಲ್ಲಿ ಗಣನೀಯ ಇಳಿಕೆಯಾಗುವ ಭೀತಿ ಶುರುವಾಗಿದೆ. ಅದರಲ್ಲೂ ಅಷ್ಟೋ ಇಷ್ಟೋ ರಸ್ತೆಗಿಳಿಯುತ್ತಿದ್ದ ವೋಲ್ವೋ ಬಸ್ಗಳು ಮೂಲೆ ಸೇರುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಇದಕ್ಕೆ ಬಿಎಂಟಿಸಿ ಪರ್ಯಾಯ ಪ್ಲಾನ್ ರೂಪಿಸಿಬೇಕಾದ ಅನಿವಾರ್ಯತೆ ಎದುರಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಹತ್ತಿರವಾಗ್ತಿದಂತೆ ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದು