Publish Date: Wed, 23 Nov 2022 (15:13 IST)
Updated Date: Wed, 23 Nov 2022 (15:15 IST)
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತೆರಳಲಿದ್ದಾರೆ.ಮಂಗಳೂರಿನ ಗರೋಡಿಯಲ್ಲಿ ಆಟೊರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಇನ್ನಷ್ಟ ಮಾಹಿತಿ ಪಡೆಯಲಿದ್ದಾರೆ.ಕರಾವಳಿ ಭಯೋತ್ಪಾದನಾ ಚಟುವಟಿಕೆಗಳ ನಂಟಿನ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಲಿದ್ದಾರೆ.ಇಂದು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಾಡಲಿದ್ದು,ಬಾಂಬ್ ಸ್ಫೋಟದಿಂದ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಹಾಗೂ ಆರೋಪಿ ಶಾರಿಕ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಗೃಹಸಚಿವರು ಭೇಟಿ ನೀಡಲಿದ್ದಾರೆ.ಬಳಿಕ ಕೃತ್ಯ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.