Select Your Language

Notifications

webdunia
webdunia
webdunia
webdunia

ಗುಂಡಿ ಬಿದ್ದ ರಸ್ತೆಗಳಿಗೆ ವೈಟ್ ಟ್ಯಾಪಿಂಗ್: ಸಚಿವ ಜಾರ್ಜ್

ಗುಂಡಿ ಬಿದ್ದ ರಸ್ತೆಗಳಿಗೆ ವೈಟ್ ಟ್ಯಾಪಿಂಗ್: ಸಚಿವ ಜಾರ್ಜ್
ಬೆಂಗಳೂರು , ಶನಿವಾರ, 16 ಸೆಪ್ಟಂಬರ್ 2017 (15:38 IST)
ಬೆಂಗಳೂರು: ನಗರದಲ್ಲಿ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಮಾಧ್ಯಮದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳ ವಿರುದ್ಧ ಸಚಿವ ಕೆ.ಜೆ.ಜಾರ್ಜ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಳೆಗೆ ರಸ್ತೆ ಹಾಳಾಗದಂತೆ ತಡೆಯಲು ವೈಟ್ ಟ್ಯಾಪಿಂಗ್ ರಸ್ತೆ(ಕಾಂಕ್ರಿಟ್ ರಸ್ತೆ) ಮಾಡಲು ನಿರ್ಧರಿಸಿದ್ದೇವೆ. ನಮ್ಮ ಸರ್ಕಾರದ ಅವಧಿಯೂಳಗೆ ಎಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಜನರ ಬೆಂಬಲದಿಂದ ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ, ಮತ್ತಷ್ಟು ಕೆಲಸ ಮಾಡುತ್ತೇವೆ. ಎಂದು ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳು ಸೇರಿ ಹಲವು ರಸ್ತೆಗಳು ಜಲಾವೃತವಾಗಿದ್ದವು. ಪರಿಣಾಮ ಹಲವು ರಸ್ತೆಗಳು ದುರಸ್ತಿಯಾಗಿದ್ದು. ಹಲವು ಕಡೆ ಗುಂಡಿಗಳು ಬಿದ್ದಿದ್ದು, ಸವಾರರು ಓಡಾಡಲು ಪರದಾಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಅಸಮಾಧಾನವಿಲ್ಲ.. ಸಿಎಂ, ಪರಮೇಶ್ವರ್ ಸಹೋದರರಂತಿದ್ದಾರೆ: ವೇಣುಗೋಪಾಲ್