Select Your Language

Notifications

webdunia
webdunia
webdunia
webdunia

ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಗೆ ಶಿಲಾನ್ಯಾಸ

ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಗೆ ಶಿಲಾನ್ಯಾಸ
ಅಹಮದಾಬಾದ್ , ಗುರುವಾರ, 14 ಸೆಪ್ಟಂಬರ್ 2017 (11:39 IST)
ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಗೆ ಅಹಮದಾಬಾದ್`ನಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಭಾರತದ ಪ್ರಧಾನ ಮಂತ್ರಿ ನರೇಂದ್ರಮೋದಿ ಶಿಲಾನ್ಯಾಸ ನೆರವೇರಿಸಿದರು. ಅಹಮದಾಬಾದ್`ನಿಂದ ಮುಂಬೈವರೆಗಿನ 508 ಕಿ.ಮೀ ಹೈಸ್ಪೀಡ್ ರೈಲ್ ಲಿಂಕ್ ಇದಾಗಿದೆ. 2022ರ ವೇಳೆಗೆ ಬುಲೆಟ್ ಟ್ರೇನ್ ಸಂಚಾರ ಆರಂಭಿಸುವ ನಿರೀಕ್ಷೆ ಇದೆ..

ಶಿಲಾನ್ಯಾಸದ ಬಳಿಕ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ, ಭಾರತ ಬಲಿಷ್ಠವಾದರೆ ಜಪಾನ್`ಗೆ ಒಳ್ಳೆಯದು, ಜಪಾನ್ ಬಲಿಷ್ಠವಾದರೆ ಭಾರತಕ್ಕೆ ಒಳ್ಳೆಯದು ಎಂದರು. ನಮಸ್ಕಾರ್ ಎನ್ನುವ ಮೂಲಕ ಭಾಷಣ ಆರಂಭಿಸಿದ ಶಿಂಜೋ ಅಬೆ ಧನ್ಯವಾದ್ ಎನ್ನುತ್ತಾ ಭಾಷಣ ಅಂತ್ಯಗೊಳಿಸಿದರು. ಭಾರತ ಮತ್ತು ಜಪಾನ್ ಪಾಲುದಾರಿಕೆ ಅತ್ಯಂತ ವಿಶೇಷ, ಜಾಗತಿಕ ಕಾರ್ಯತಂತ್ರವಾಗಿದೆ ಎಂದಿದ್ದಾರೆ. ಇದೇವೇಳೆ, ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹೋನ್ನತ ಕನಸಿನ ಸಾಕಾರಕ್ಕೆ ನವಭಾರತ ಮಹತ್ವದ ಹೆಜ್ಜೆ ಇಟ್ಟಿದೆ ಎಂದಿದ್ದಾರೆ.

ಇಂಡಿಯನ್ ರೈಲ್ವೇಸ್ ಮತ್ತು ಜಪಾನಿನ ಶಿಂಕಾನ್ಸೇನ್ ಟೆಕ್ನಾಲಜಿಯ 1.1 ಲಕ್ಷ ಕೋಟಿ ರೂಪಾಯಿಯ ಬುಲೆಟ್ ಟ್ರೇನ್ ಯೋಜನೆ ಇದಾಗಿದ್ದು, 2023ರ ವೇಳೆಗೆ ಮೊದಲ ಬುಲೆಟ್ ರೈಲು ಒಡಿಸಲು ಜಪಾನಿನ ಸಂಸ್ತೆ ಉದ್ದೇಶಿಸಿದೆ. ಆದರೆ, 2022ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬುಲೆಟ್ ಟ್ರೇನ್ ಆರಂಭವಾಗಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಆಶಯವಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಈ ಬುಲೆಟ್ ಟ್ರೇನ್ ಆರಂಭದಿಂದ 4000 ಮಂದಿ ಉದ್ಯೋಗ ಸಿಗಲಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ನೆರವಾಗಲಿದೆ ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ಆರ್ಡರ್ ಮಾಡಿದ ವ್ಯಕ್ತಿ ಕೈಗೆ ಬಂದಿದ್ದು ಏನು ಗೊತ್ತಾ?