Select Your Language

Notifications

webdunia
webdunia
webdunia
webdunia

ಸೆ.3 ರಂದು ಪ್ರಧಾನಿ ಮೋದಿಯಿಂದ ಸಚಿವ ಸಂಪುಟ ಪುನಾರಚನೆ

ಸೆ.3 ರಂದು ಪ್ರಧಾನಿ ಮೋದಿಯಿಂದ ಸಚಿವ ಸಂಪುಟ ಪುನಾರಚನೆ
ನವದೆಹಲಿ , ಶುಕ್ರವಾರ, 1 ಸೆಪ್ಟಂಬರ್ 2017 (15:54 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟ ಪುನಾರಚನೆ ಮಾಡುತ್ತಿದ್ದು ಭಾನುವಾರದಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಶಪಥ ಸಮಾರಂಭ ನಡೆಯಲಿದೆ ಎಂದು ಪಿಎಂಓ ಕಚೇರಿಯ ಮೂಲಗಳು ತಿಳಿಸಿವೆ. 
ಕಳೆದ 2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮೂರನೇ ಬಾರಿಗೆ ಸಂಪುಟ ಪುನಾರಚನೆಯಾಗುತ್ತಿದೆ.
 
ಗುರುವಾರ ಸಂಜೆ ಬಿಜೆಪಿ ಅಧ್ಯಕ್ಷ ಅಮಿತ್ ಷಾರೊಂದಿಗೆ ಸಭೆ ನಡೆಸಿದ ಮೋದಿ ಸಚಿವರ ನೇಮಕ ಕುರಿತಂತೆ ಅಂತಿಮ ಕಸರತ್ತು ನಡೆಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಜೆಡಿಯು ಮತ್ತು ಎಐಎಡಿಎಂಕೆ ಪಕ್ಷಗಳ ಸಂಸದರಿಗೆ ಸಚಿವ ಸ್ಥಾನ ನೀಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.  
 
ಈಗಾಗಲೇ, ಐದು ಮಂತ್ರಿಗಳು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಪುನರ್ರಚನೆಗೆ ವೇದಿಕೆಯನ್ನು ಸಿದ್ದಪಡಿಸಿದ್ದಾರೆ. 2019 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈಗೆ ಗೃಹಸಚಿವ ಖಾತೆ: ಬಿಜೆಪಿ ನಾಯಕರ ತುರ್ತುಸಭೆ ಕರೆದ ಯಡಿಯೂರಪ್ಪ