ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ ಮೇಲೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ ಎಂದು ವರದಿಯಾಗುತ್ತಿದೆ. ಇದು ಎಷ್ಟು ನಿಜ? ಇಲ್ಲಿದೆ ರಿಯಾಲಿಟಿ ಚೆಕ್.
ಸಾಮಾನ್ಯವಾಗಿ ಬೆಂಗಳೂರು ಮೆಟ್ರೋದಲ್ಲಿ ಸಂಜೆ ಮತ್ತು ಬೆಳಿಗ್ಗೆ ಕಚೇರಿ ಸಮಯದಲ್ಲಿ ಹತ್ತಲೂ ಜಾಗವಿಲ್ಲದಷ್ಟು ರಷ್ ಇರುತ್ತದೆ. ಪೀಕ್ ಅವರ್ ನಲ್ಲಿ ಮತ್ತು ವಾರಂತ್ಯದಲ್ಲಿ ಸುತ್ತಾಡುವವರು ಮೆಟ್ರೋವನ್ನು ಆಶ್ರಯಿಸುತ್ತಿದ್ದರು.
ಆದರೆ ಈಗ ವಾರಂತ್ಯದ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದೆ ಎಂದೇ ಹೇಳಬಹುದು. ಹಾಗಿದ್ದರೂ ಮೆಜೆಸ್ಟಿಕ್ ಕಡೆಗೆ ಸಂಚಿರಿಸುವ ಮೆಟ್ರೋದಲ್ಲಿ ತಕ್ಕಮಟ್ಟಿಗೆ ಪ್ರಯಾಣಿಕರು ಎಂದಿನಂತೇ ಇದ್ದಾರೆ.
ಆದರೆ ವೈಟ್ ಫೀಲ್ಡ್ ಕಡೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೆಟ್ರೋ ನಿಲ್ದಾಣಗಳಲ್ಲೂ ಮೊದಲಿನಷ್ಟು ನೂಕುನುಗ್ಗಲು ಕಂಡುಬರುತ್ತಿಲ್ಲ. ಅನಿವಾರ್ಯವಾಗಿ ಮೆಟ್ರೋ ಬಳಸುವವರು ಎಂದಿನಂತೇ ಮೆಟ್ರೋ ಮೂಲಕ ಸಂಚರಿಸುತ್ತಿದ್ದಾರೆ. ಆದರೆ ಅಪರೂಪಕ್ಕೆ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ವಿಶೇಷವಾಗಿ ಭಾನುವಾರಗಳಂದು ಬೆಂಗಳೂರು ವೀಕ್ಷಣೆಗೆ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಅಷ್ಟರಮಟ್ಟಿಗೆ ಮೆಟ್ರೋ ಪ್ರಯಾಣ ದರ ಜನರ ಮೇಲೆ ಪ್ರಭಾವ ಬೀರಿದೆ ಎನ್ನಬಹುದು.