ಬೆಂಗಳೂರು: ಕರ್ನಾಟಕದಲ್ಲಿ ತೀವ್ರ ಬಿಸಿಲಿನ ತಾಪದ ನಡುವೆಯೂ ಮಳೆಯಾಗುವ ಬಗ್ಗೆ ಹವಾಮಾನ ವರದಿಗಳು ಹೇಳಿದ್ದವು. ಅದು ಸುಳ್ಳಾಗಲಿಲ್ಲ. ರಾಜ್ಯದ ಈ ಭಾಗದಲ್ಲಿ ನಿನ್ನೆ ಮಳೆಯಾಗಿತ್ತು.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವ ಹಿನ್ನಲೆಯಲ್ಲಿ ಕರ್ನಾಟಕದ ಕೆಲವೆಡೆ ಮಳೆಯಾಗಬಹುದು ಎಂದು ಹವಾಮಾನ ವರದಿಗಳು ಈಗಾಗಲೇ ಹೇಳಿದ್ದವು. ಅದು ಕೊನೆಗೂ ಸುಳ್ಳಾಗಲಿಲ್ಲ. ಕರ್ನಾಟಕದ ಕೆಲವು ಕಡೆ ತೀವ್ರ ಮಳೆಯಾಗದೇ ಇದ್ದರೂ ತುಂತುರು ಮಳೆಯಾಗಿದೆ.
ಗೇರುಸೊಪ್ಪದಲ್ಲಿ ನಿನ್ನೆ ಸಣ್ಣ ಮಟ್ಟಿನ ಮಳೆಯಾಗಿರುವ ವರದಿಗಳಾಗಿವೆ. ಅದರ ಹೊರತಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಮೋಡ ಕವಿದ ವಾತಾವರಣವಿತ್ತು. ಉಳಿದಂತೆ ಒಣ ಹವೆ ಮುಂದುವರಿದಿದೆ.
ಕರ್ನಾಟಕದ ಕರಾವಳಿಯಲ್ಲಿ ತಾಪಮಾನ ಈಗ 34-35 ಡಿಗ್ರಿಯಷ್ಟಿತ್ತು. ಇಂದೂ ಕೂಡಾ ಅದೇ ತಾಪಮಾನ ಮುಂದುವರಿಯಲಿದೆ. ಹಾಗಿದ್ದರೂ ಚಂಡಮಾರುತದ ಪರಿಣಾಮ ಈ ಜಿಲ್ಲೆಗಳಲ್ಲಿ ಸ್ವಲ್ಪ ಹನಿ ಮಳೆಯಾದರೂ ಅಚ್ಚರಿಯಿಲ್ಲ.