Publish Date: Sun, 15 Jan 2023 (14:07 IST)
Updated Date: Sun, 15 Jan 2023 (14:10 IST)
ಮಹಾರಾಷ್ಟ್ರದಿಂದ ಗಡಿ ಗಲಾಟೆಯಾದರೆ, ಗೋವಾ ರಾಜ್ಯ ಜಲ ಜಗಳಕ್ಕೆ ಇಳಿಯುತ್ತಿದೆ. ಮಹದಾಯಿ ವಿಚಾರದಲ್ಲಿ ಗೋವಾ ಮತ್ತೆ ಕ್ಯಾತೆ ತೆಗೆದಿದೆ. ಕೇಂದ್ರ ಗೃಹ ಸಚಿವರನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ನೇತೃತ್ವದ ನಿಯೋಗ ಭೇಟಿಯಾಗಲಿದೆ. ಭೇಟಿಯಾಗಿ ಮನವಿ ಸಲ್ಲಿಸಲಿದೆ. ಕರ್ನಾಟಕ DPRಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಡ ಹೇರಲಿದ್ದಾರೆ. ಕಳಸಾ-ಬಂಡೂರಿ ಅಣೆಕಟ್ಟು ಯೋಜನೆಗೆ ಗೋವಾ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.