Select Your Language

Notifications

webdunia
webdunia
webdunia
webdunia

ಪ್ರತಿ ವರ್ಷದಂತೆ ಈ ವರ್ಷವೂ ಗವಿ ಗಂಗಾಧರ ದೇವಾಲಯದಲ್ಲಿ ನಡೆಯಲಿದೆ ಕೌತುಕ

ಪ್ರತಿ ವರ್ಷದಂತೆ ಈ ವರ್ಷವೂ ಗವಿ ಗಂಗಾಧರ ದೇವಾಲಯದಲ್ಲಿ ನಡೆಯಲಿದೆ ಕೌತುಕ
bangalore , ಭಾನುವಾರ, 15 ಜನವರಿ 2023 (13:49 IST)
ಮಕರ ಸಂಕ್ರಾಂತಿ ಹಿನ್ನಲೆ ಪ್ರತಿ ವರ್ಷದಂತೆ ಈ ವರ್ಷವೂ ಗವಿ ಗಂಗಾಧರ ದೇವಾಲಯದಲ್ಲಿ ಕೌತುಕ ನಡೆಯಲಿದೆ .ಸಂಕ್ರಾಂತಿಯಂದು ನಡೆಯುವ ಕೌತುಕವನ್ನ ಕಣ್ತುಂಬಿಕೊಳ್ಳಲು ಜನ ಕಾದಿದ್ದಾರೆ.ಪ್ರತಿವರ್ಷದಂತೆ ಈ ವರ್ಷ ಕೂಡ ಗವಿಗಂಗಾಧರನಿಗೆ ನಮಿಸಿ ಸೂರ್ಯದೇವ ದಕ್ಷಿಣಾಯನದಿಂದ ಉತ್ತರಾಯಣಕ್ಕೆ  ಪಥ ಬದಲಾವಣೆ ಮಾಡಲಿದೆ.
 
 ಪಥ ಬದಲಾವಣೆಗೂ ಮುನ್ನ ಮೊದಲು ಶಿವಲಿಂಗವನ್ನ  ಸ್ಪರ್ಷಿಸಿ ಸೂರ್ಯದೇವ ಸಂಜೆ 5.20 ರಿಂದ 5.28 ರ ಸಮಯದಲ್ಲಿ  ಶಿವನಿಗೆ ಸೂರ್ಯ ನಮಸ್ಕರಿಸಲಿದ್ದಾರೆ.ಒಟ್ಟು 8 ನಿಮಿಷದ ಒಳಗೆ ಶಿವನನ್ನ ಸೂರ್ಯದೇವ ಸ್ಪರ್ಶಿಸಲಿದೆ.ಸೂರ್ಯ ಶಿವನನ್ನ ಸ್ಪರ್ಶಿಸುವ ವೇಳೆ ದೇವಸ್ಥಾನದ ಒಳ ಭಾಗಕ್ಕೆ ಯಾರಿಗೂ ಪ್ರವೇಶವಿಲ್ಲ.ಕೌತುಕ ಕಣ್ತುಂಬಿಕೊಳ್ಳಲು ಭಕ್ತರಿಗೆ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ.
 
ಭಕ್ತಾಧಿಗಳು ಹೊರಭಾಗದಲ್ಲಿಯೇ ನಿಂತು ಸೂರ್ಯ ಶಿವನನ್ನ ನಮಿಸುವ ದೃಶ್ಯವನ್ನ ಕಾಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.ಮುಂಜಾನೆ 5 ಗಂಟೆಯಿಂದಲೆ ದೇವರಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ‌ ಮಾಡಲಾಗ್ತಿದೆ.ಮದ್ಯಾಹ್ನ‌ 12 ಗಂಟೆಗೆ ದೇವಾಲಯಕ್ಕೆ ಬಾಗಿಲು ಹಾಕಲಾಗುತ್ತೆ.ಸೂರ್ಯ ಶಿವನನ್ನ ಸ್ಪರ್ಶಿಸಿದ ನಂತ್ರ ಶಿವನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಗುವುದು.ಸಂಜೆ 6 ಗಂಟೆ ಬಳಿಕ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಬ್ರೇಕ್