Publish Date: Fri, 29 Sep 2017 (12:45 IST)
Updated Date: Fri, 29 Sep 2017 (12:47 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿಯವರ ಆರೋಗ್ಯ ವಿಚಾರಿಸಿದ್ದಾರೆ.
ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದರೂ, ವೈಯಕ್ತಿಕ ವಿಚಾರದಲ್ಲಿ ಇದನ್ನು ತೋರುಗೊಡದ ಇಬ್ಬರೂ ನಾಯಕರು ಪರಪಸ್ಪರ ಕುಶಲೋಪರಿ ನಡೆಸಿದರು.
ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಮಾರಸ್ವಾಮಿಯವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ಆರೋಗ್ಯ ವಿಚಾರಿಸಿದ್ದಲ್ಲದೆ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ನಂತರ ವೈದ್ಯರೊಂದಿಗೆ ಕ್ಷಣ ಕಾಲ ಸಮಾಲೋಚನೆ ನಡೆಸಿದರು.
‘ಸದ್ಯಕ್ಕೆ ರಾಜಕಾರಣ ಬೇಡ. ವಿಶ್ರಾಂತಿ ಪಡೆಯಿರಿ ಎಂದಿದ್ದೇನೆ’ ಎಂದು ಸಿಎಂ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಜತೆ ಸಚಿವ ಆಂಜನೇಯ, ಡಿಕೆ ಶಿವಕುಮಾರ್ ಮುಂತಾದವರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ