Publish Date: Thu, 28 Sep 2017 (14:56 IST)
Updated Date: Thu, 28 Sep 2017 (14:58 IST)
ಮುಂಬರುವ ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ನಮ್ಮದೇ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐದು ತಾಲೂಕುಗಳಿಗೆ ನೀರು ಹರಿಸುವ ಯೋಜನೆಯ ಶಂಕುಸ್ಥಾಪನೆಯನ್ನು ನಾವೇ ಮಾಡ್ತೇವೆ. ಉದ್ಘಾಟನೆಯನ್ನು ನಾವೇ ಮಾಡ್ತೇವೆ ಎಂದು ತಿಳಿಸಿದ್ದಾರೆ.
ಇದು ನನ್ನ ಯೋಜನೆ ಅಂತ ಎಲ್ಲೂ ಹೇಳ್ಕೋಬೇಡಪ್ಪ. ಇದು ತಿಮ್ಮರಾಯಪ್ಪ ಅವರಿಗೆ ಗೊತ್ತಿರುವ ವಿಷಯ ಎಂದು ಜೆಡಿಎಸ್ ಶಾಸಕ ತಿಮ್ಮರಾಯಪ್ಪಗೆ ಕಿಚಾಯಿಸಿದ ಸಿಎಂ, ತುಂಗಭದ್ರಾ ನೀರಿನ ಯೋಜನೆಯನ್ನು ನಾವೇ ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ನಂಚರ ಬಡವರ, ದೀನ ದಲಿತರ, ಶೋಷಿತರ ಏಳಿಗೆಗಾಗಿ ಹಗಲಿರಳು ಕರ್ತವ್ಯ ನಿರ್ವಹಿಸಿದೆ. ನೀರಾವರಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಸರಕಾರ ಆದ್ಯತೆ ಮೇರೆಗೆ ಬಿಡುಗಡೆ ಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.