Publish Date: Thu, 28 Sep 2017 (17:11 IST)
Updated Date: Thu, 28 Sep 2017 (17:13 IST)
ಬಿಬಿಎಂಪಿ ಮೈತ್ರಿಯನ್ನು ಮುಂದುವರಿಸಲು ಸಹಕಾರ ನೀಡಿದ್ದಕ್ಕಾಗಿ ಜೆಡಿಎಸ್ ನಾಯಕರನ್ನು ಗೃಹಸಚಿವ ರಾಮಲಿಂಗಾರೆಡ್ಡಿ ಅಭಿನಂಧಿಸಿದ್ದಾರೆ.
ಜೆಡಿಎಸ್ ಪಕ್ಷದ ವರಿಷ್ಛ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಕುಪೇಂದ್ರ ರೆಡ್ಡಿಯವರಿಗೆ ಸಚಿವ ರಾಮಲಿಂಗಾರೆಡ್ಡಿ ಅಭನಂಧನೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಿಂದಾಗಿ ಬಿಬಿಎಂಪಿಯಲ್ಲಿ ನೂತನ ಮಹಾಪೌರರಾಗಿ ಕಾಂಗ್ರೆಸ್ ಪಕ್ಷದ ಸಂಪತ್‌ರಾಜ್ ಮತ್ತು ಜೆಡಿಎಸ್ ಪಕ್ಷದ ಪದ್ಮಾವತಿ ನರಸಿಂಹಮೂರ್ತಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಾಗಿ ನೂತನ ಮಹಾಪೌರರಾದ ಸಂಪತ್ ರಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.