Select Your Language

Notifications

webdunia
webdunia
webdunia
webdunia

ಪತ್ನಿ ಕೊಲೆ ಮಾಡಿ ಠಾಣೆಗೆ ಶರಣಾದ ಪತಿ, ಪೊಲೀಸರ ಮುಂದೇ ಹೇಳಿದ್ದೇನು

Karnataka Crime Case, Rejection of sex, Husband Wife Fight,

Sampriya

ಕಲಬುರಗಿ , ಭಾನುವಾರ, 29 ಸೆಪ್ಟಂಬರ್ 2024 (13:13 IST)
ಕಲಬುರಗಿ: ಪತ್ನಿಯನ್ನು ಕೊಂದ ಪತಿ ಪೊಲೀಸರಿಗೆ ಶರಣಾದ ಘಟನೆ ತಾಲ್ಲೂಕಿನ ಬಟಗೇರಾ ಬಿ ಗ್ರಾಮದಲ್ಲಿ ನಡೆದಿದೆ. ಬೆಟಗೇರ ಗ್ರಾಮದ ನಿವಾಸಿ ನಾಗಮ್ಮ (42) ಪತಿ ಶೇಖಪ್ಪನಿಂದ ಕೊಲೆಯಾಗಿದ್ದಾಳೆ.

ದಂಪತಿ ಮಧ್ಯೆ ಆಗಾಗ ರಾತ್ರಿ ಜಗಳ ನಡೆಯುತ್ತಿತ್ತು. ಸೆಕ್ಸ್ ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಪತ್ನಿಯನ್ನು ಹತ್ಯೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ತಾನಾಗಿಯೇ ಸರೆಂಡರ್ ಆಗಿದ್ದಾನೆ. ಪತಿ ಪತ್ನಿ ಮಧ್ಯೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.

ಭಾನುವಾರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಸದ್ಯ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಮೂರ್ಖರ ನಾಯಕ ಎಂದಿದ್ದೇಕೆ ಸಿಟಿ ರವಿ