Select Your Language

Notifications

webdunia
webdunia
webdunia
webdunia

ಗಂಡ ಪ್ರೆಂಚ್ ಫ್ರೈಸ್, ಮಾಂಸ ತಿನ್ನಲು ಬಿಡುತ್ತಿಲ್ಲವೆಂದು ಠಾಣೆ ಮೆಟ್ಟಿಲೇರಿದ ಪತ್ನಿಗೆ ಕೋರ್ಟ್ ಏನ್ ಹೇಳಿತು ನೋಡಿ

FrenchFries

Sampriya

ಬೆಂಗಳೂರು , ಶನಿವಾರ, 24 ಆಗಸ್ಟ್ 2024 (16:16 IST)
Photo Courtesy X
ಬೆಂಗಳೂರು: ತನ್ನ ಗಂಡ ಬೇಕಾದ ಹಾಗೇ ಪ್ರೆಂಚ್ ಫ್ರೈಸ್, ನಾನ್‌ ವೆಜ್‌ ಊಟಗಳನ್ನು ತಿನ್ನಲು ಬಿಡುತ್ತಿಲ್ಲ ಎಂದು ಪತ್ನಿಯೊಬ್ಬಳು ದಾಖಲಿಸಿದ್ದ ಎಫ್‌ಐಅರ್‌ಗೆ ಹೈಕೋರ್ಟ್, ಇದೊಂದು ಕ್ಷುಲ್ಲಕ ಕಾರಣ ಎಂದು ತಡೆ ಆದೇಶ ಹೊರಡಿಸಿದೆ.

ಈ ಸಂಬಂಧ ಬೆಂಗಳೂರಿನ 36 ವರ್ಷದ (ಸದ್ಯ ಅಮೆರಿಕದ ಟೆಕ್ಸಾಸ್‌ನಲ್ಲಿ ಉದ್ಯೋಗಿ) ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಪತಿ ನೀಡಿದ ದೂರಿನಲ್ಲಿ ಏನಿದೆ: ಮದುವೆ ನಂತರ ಅವಲಂಬಿತ ವೀಸಾದಡಿ ಪತ್ನಿಯನ್ನು ಅಮೆರಿಕಕ್ಕೆ ಕರೆದುಕೊಂಡು ಹೋದೆ. ನಮಗೆ ಮಕ್ಕಳು ಇದ್ದಾರೆ. ನನ್ನ ಪತ್ನಿ  ಅತ್ಯಂತ ಕಠಿಣ ಸ್ವಭಾವದವಳಿದ್ದಾಳೆ. ನನಗೆ ಹೊತ್ತಿಗೆ ಸರಿಯಾಗಿ ಅಡುಗೆ ಮಾಡಿಕೊಡುವುದಿಲ್ಲ. ನಾನೇನಾದರು ಕೇಳಿದರೆ ನೀನೇನು ನನ್ನ ಅಡುಗೆ ಮಾಡಿ ಹಾಕುವುದಕ್ಕೆ ಮದುವೆಯಾಗಿದ್ದೀಯಾ ಎಂದು ಜೋರು ಮಾಡುತ್ತಾಳೆ ಎಂದು ದೂರಿದ್ದಾರೆ.

ಸದಾ ಮೊಬೈಲ್‌ನಲ್ಲಿರುವ ಆಕೆ ಪಾಕಿಸ್ತಾನದ ನಾಟಕ, ಸೀರಿಯಲ್‌ಗಳು, ಫೇಸ್‌ ಬುಕ್‌, ಇನ್‌ಸ್ಟಾಗ್ರಾಂಗಳ ವೀಕ್ಷಣೆಯಲ್ಲೇ ಮುಳುಗಿರುತ್ತಾಳೆ. ತನ್ನ ಸೋದರ ಸಂಬಂಧಿಗಳ ಜೊತೆ ರೀಲ್ಸ್‌ ಮಾಡುವ ಹುಚ್ಚು ಬೇರೆ ಇದೆ. ಇನ್ನೂ ಅಂಗಡಿಗೆ ಹೋದರೆ ಬೇಕಾಬಿಟ್ಟಿ ಹಣ್ಣು, ಸಾಮಾನುಗಳನ್ನು ತರುತ್ತಾಳೆ. ಆದರೆ ಅವು ಯಾವುದನ್ನು ಸರಿಯಾಗಿ ಬಳಸದೆ ಕಸದ ಬುಟ್ಟಿಗೆ ಎಸೆಯುತ್ತಾಳೆ. ಆಕೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದು, ಆದ್ದರಿಂದ, ಆಕೆ ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಪತಿ ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿಯಲ್ಲಿ ಪತಿ, ಪತ್ನಿಯ ಸಣ್ಣ ಸಣ್ಣ ಸಂಗತಿಗಳನ್ನೂ ಪಟ್ಟಿ ಮಾಡಿ ಆಕ್ಷೇಪಿಸಿರುವುದು ಮತ್ತು ವಿಚಾರಣೆ ವೇಳೆ 'ಫ್ರೆಂಚ್‌ ಫ್ರೈಸ್‌ ತಿನ್ನಲು ಬಿಡುತ್ತಿಲ್ಲ' ಎಂಬ ಆಕ್ಷೇಪಣೆಯನ್ನು ಆಲಿಸಿದ ನ್ಯಾಯಮೂರ್ತಿಗಳು, 'ಇದೊಂದು ಕ್ಷುಲ್ಲಕ ವಿಚಾರ' ಎಂದು ಮೌಖಿಕವಾಗಿ ಹೇಳಿ ತಡೆ ಆದೇಶ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾಬ್ಬಾ... ಜೀವ ವಿಮೆ ಹಣಕ್ಕಾಗಿ ತಾನೇ ಸತ್ತಂತೆ ನಟಿಸಿ, ಭಿಕ್ಷುಕನ ಪ್ರಾಣ ತೆಗೆದ ಭೂಪ