Select Your Language

Notifications

webdunia
webdunia
webdunia
webdunia

ಅಬ್ಬಾಬ್ಬಾ... ಜೀವ ವಿಮೆ ಹಣಕ್ಕಾಗಿ ತಾನೇ ಸತ್ತಂತೆ ನಟಿಸಿ, ಭಿಕ್ಷುಕನ ಪ್ರಾಣ ತೆಗೆದ ಭೂಪ

Arrest

Sampriya

ಹಾಸನ , ಶನಿವಾರ, 24 ಆಗಸ್ಟ್ 2024 (16:07 IST)
Photo Courtesy Facebook
ಹಾಸನ: ಸಾಲದಲ್ಲಿ ಮುಳಗಿ ಹೋಗಿದ್ದ ವ್ಯಕ್ತಿಯೊಬ್ಬ ಜೀವ ವಿಮೆ ಹಣ ಪಡೆಯುವ ಸಲುವಾಗಿ  ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವಂತೆ ಬಿಂಬಿಸಿದ್ದ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶಾಮಿಗೌಡ ಹಾಗೂ ಆತನಿಗೆ ಸಹಕಾರ ಮಾಡಿದ ಪತ್ನಿ ಶಿಲ್ಪಾರಾಣಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್‌ 13ರಂದು ಗಂಡಸಿ ಠಾಣಾ ವ್ಯಾಪ್ತಿಯ ಗೊಲ್ಲರಹೊಸಳ್ಳಿ ಗೇಟ್‌ ಬಳಿ ಅಪಘಾತ ನಡೆದಿತ್ತು. ಕಾರಿನ ಚಕ್ರ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಹೊಸಕೋಟೆ ತಾಲ್ಲೂಕಿನ ಮುನಿಶಾಮಿಗೌಡ ಮೃತಪಟ್ಟಿರುವುದಾಗಿ ಪ್ರಕರಣವು ದಾಖಲಾಗಿತ್ತು.

ಶವವನ್ನು ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಮುನಿಶಾಮಿಗೌಡ ಪತ್ನಿ ಆಸ್ಪತ್ರೆಗೆ ಭೇಟಿ ನೀಡಿ, ಇದು ತನ್ನ ಪತಿಯ ಶವ ಎಂದು ಗುರುತಿಸಿದ್ದರು. ತದನಂತರ ಶವವನ್ನು ತೆಗೆದುಕೊಂಡು ಹೋಗಿ ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇನ್ನೂ ಶವದ ಕುತ್ತಿಗೆ ಮೇಲೆ ಗಾಯದ ಗುರುತು ನೋಡಿ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಈ ವೇಳೆ ಹಣಕ್ಕಾಗಿ ದಂಪತಿ ಮಾಡಿದ ಹತ್ಯೆ ಪ್ರಕರಣದ ರಟ್ಟಾಗಿದೆ.

ವಿಪರೀತ ಸಾಲ ಮಾಡಿಕೊಂಡಿದ್ದ ಮುನಿಶಾಮಿಗೌಡ ಜೀವವಿಮೆ ಹಣಕ್ಕಾಗಿ ದೊಡ್ಡ ಹೈಡ್ರಾಮ ಮಾಡಿದ್ದಾನೆ. ತಾನೇ ಸತ್ತಂತೆ ನಟಿಸಿ, ಜೀವವಿಮೆ ಹಣ ಪಡೆಯಲು ಯೋಜನೆ ರೂಪಿಸಿದ್ದಾನೆ. ಇದಕ್ಕಾಗಿ ಒಬ್ಬ ಭಿಕ್ಷಕನನ್ನು ವಿಶ್ವಾಸಕ್ಕೆ ಪಡೆದಿದ್ದಾನೆ. ಆತನನ್ನು ಕಾರಿನಲ್ಲಿ ಕರೆದುಕೊಂಡು ಬಂದು, ಗೊಲ್ಲರಹೊಸಹಳ್ಳಿ ಗೇಟ್ ಬಳಿ ಕಾರಿನ ಟಾಯರ್ ಬದಲಿಸುವಂತೆ ಆ ಭಿಕ್ಷುಕನಿಗೆ ಮುನಿಶಾಮಿಗೌಡ ಹೇಳಿದ್ದಾನೆ.

ಟಯರ್ ಬದಲಿಸುತ್ತಿದ್ದ ವೇಳೆ ಭಿಕ್ಷುಕನ ಕುತ್ತಿಗೆಗೆ ಹಗ್ಗ ಹಾಕಿ ರಸ್ತೆಗೆ ಎಳೆದಿದ್ದಾನೆ. ನಂತರ ಆತನ ಮೇಲೆ ಲಾರಿಯನ್ನು ಹರಿಸಿದ್ದಾನೆ. ಈ ರಸ್ತೆ ಅಪಘಾತದಲ್ಲಿ ತಾನೇ ಸತ್ತಂತೆ ನಟಿಸಿ, ಅಜ್ಞಾತ ಸ್ಥಳದಲ್ಲಿ ತಲೆ ಮರೆಸಿಕೊಂಡಿದ್ದ. ಹೊರಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೇ ಒತ್ತಡಕ್ಕೆ ಸಿಲುಕಿದ್ದ ಆತ ನಂತರ  ಶಿಡ್ಲಘಟ್ಟ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಅವರನ್ನು ಭೇಟಿಯಾಗಿದ್ದಾನೆ. ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಆ. 13 ರಂದು ನಡೆದ ಅಪಘಾತದಲ್ಲಿ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದ. ಇದರಿಂದ ಅನುಮಾನಗೊಂಡ ಶಿಡ್ಲಘಟ್ಟ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್, ಮುನಿಶಾಮಿಗೌಡನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು.

ತನಿಖೆ ಆರಂಭಿಸಿದ ಪೊಲೀಸರ ಆತನ ಪತ್ನಿ ಶಿಲ್ಪಾರಾಣಿಯ ವಿಚಾರಣೆ ನಡೆಸಿದ್ದಾರೆ. ಆಕೆ ಏನು ಗೊತ್ತಿಲ್ಲದಂತೆ ನಟಿಸಿದಾಗ , ಆಕೆಯ ಎದುರು ಮುನಿಶಾಮಿಗೌಡನನ್ನು ಹಾಜರುಪಡಿಸಿದಾಗ ಎಲ್ಲ ವಿವರವನ್ನು ದಂಪತಿ ಬಹಿರಂಗ ಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಗಾಂಧಿ, ವಾಜಪೇಯಿಗಿಂತಲೂ ಮೋದಿಯೇ ಜನಪ್ರಿಯ ಪ್ರಧಾನಿ